ಮಡಿಕೇರಿ | ಕೆಡವಿರುವ ನೀರಿನ ಟ್ಯಾಂಕ್ ಗೆ ಬದಲಾಗಿ ಹೊಸ ಟ್ಯಾಂಕ್ ನಿರ್ಮಿಸುವಂತೆ ಎಸ್.ಡಿ.ಪಿ.ಐ ಮನವಿ

Prasthutha|

ಮಡಿಕೇರಿ: ನಗರದ ಮಹದೇವಪೇಟೆಯಲ್ಲಿರುವ ನಗರಸಭೆಯ ನೀರಿನ ಟ್ಯಾಂಕನ್ನು ಕೆಡವಿರುವುದಕ್ಕೆ ಬದಲಾಗಿ ರಾಜೇಶ್‌ರವರ ಮನೆಯ ಪಕ್ಕದಲ್ಲಿರುವ ನಗರಸಭೆಯ ಜಾಗದಲ್ಲಿ ಹೊಸ ನೀರಿನ ಟ್ಯಾಂಕನ್ನು ನಿರ್ಮಿಸುವಂತೆ ಎಸ್.ಡಿ.ಪಿ.ಐ ನಗರಸಭಾ ಸದಸ್ಯರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

- Advertisement -

 ಮಡಿಕೇರಿ ನಗರದ ಬ್ಲಾಕ್ ಸಂಖ್ಯೆ 2 , ವಾರ್ಡ್ ಸಂಖ್ಯೆ 7 ರ ಮಹದೇವಪೇಟೆಯಲ್ಲಿರುವ ರಾಜೇಶ್ ಅವರ ಮನೆಯ ಬದಿಯಲ್ಲಿ ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕ್ ಇತ್ತು. ಈ ಟ್ಯಾಂಕನ್ನು ಗಣಪತಿ ಬೀದಿ ರಸ್ತೆ ಅಗಲೀಕರಿಸುವ ಸಂದರ್ಭದಲ್ಲಿ ನಗರಸಭೆಯ ವತಿಯಿಂದ ಕೆಡವಿ ಹಾಕಲಾಗಿದೆ. ಅದೇ ರೀತಿ ಪಕ್ಕದಲ್ಲಿದ್ದ ನಗರಸಭೆಯ ಜಾಗದಲ್ಲಿದ್ದಂತಹ ಒಂದು ಚಿಕ್ಕ ಕ್ಯಾಂಟೀನ್ ಅನ್ನು ಕೂಡ ತೆರವುಗೊಳಿಸಲಾಗಿದೆ.  ರಾಜೇಶ್‌ರವರ ಮನೆಯ ಬದಿಯಲ್ಲಿ ಲಭ್ಯವಿದ್ದ ಜಾಗ ನಗರಸಭೆ ಆಸ್ತಿಯಾಗಿದೆ. ಇದು ಯಾರದೇ ಖಾಸಗಿ ಆಸ್ತಿಯಾಗಿರುವುದಿಲ್ಲ. ರಾಜೇಶ್‌ರವರ ಮನೆಯ ಬದಿಯಲ್ಲಿದ್ದ ಕೆಡವಿ ಹಾಕಿರುವ ಕ್ಯಾಂಟೀನ್ ಮಳಿಗೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ನಗರಸಭೆಯ ಅನುಮತಿಯಿಲ್ಲದೆ ಅಂಗಡಿ ನಿರ್ಮಿಸುತ್ತಿರುವುದು ಕಂಡುಬಂದಿದೆ. ನಗರಸಭೆಯ ನೀರಿನ ಟ್ಯಾಂಕನ್ನು ಕೆಡವಿರುವುದರಿಂದ ಬದಲಿಯಾಗಿ ಇಲ್ಲಿ ಲಭ್ಯವಿರುವ ನಗರಸಭೆಯ ಖಾಲಿ ಜಾಗದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಹೊಸದಾಗಿ ನೀರಿನ ಟ್ಯಾಂಕನ್ನು ನಗರಸಭೆಯ ವತಿಯಿಂದ ನಿರ್ಮಿಸಬೇಕಾಗಿದೆ. ಇಲ್ಲದಿದ್ದರೆ ನೀರಿನ ಟ್ಯಾಂಕಿನಿಂದ ಸರಬರಾಜಾಗುತ್ತಿದ್ದ ನೀರನ್ನು ಬಳಸುತ್ತಿದ್ದವರಿಗೆ ತೊಂದರೆಯಾಗುತ್ತದೆ. ಆದುದರಿಂದ ಕೂಡಲೇ ಸ್ಥಳ ಪರಿಶೀಲಿಸಿ ನಗರಸಭೆಯ ಅನುಮತಿ ಇಲ್ಲದೆ ನಗರಸಭೆಯ ಜಾಗದಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳು ಅಂಗಡಿ ಕಟ್ಟಡ ನಿರ್ಮಿಸದಂತೆ ತಡೆಹಿಡಿಯುವಂತೆಯೂ ಮತ್ತು ಗಣಪತಿ ಬೀದಿಯನ್ನು ವಿಸ್ತರಿಸುವಾಗ ರಾಜೇಶ್‌ರವರು ಅವರ ಮನೆಯ ಜಾಗವನ್ನು ತೆರವುಗೊಳಿಸದಿರುವುದನ್ನು ಸಹ ಪರಿಶೀಲಿಸಿ ಕೂಡಲೇ ರಸ್ತೆ ವಿಸ್ತರಣೆಯ ಕೆಲಸ ಮತ್ತು ಚರಂಡಿ ನಿರ್ಮಾಣದ ಕೆಲಸಕ್ಕೆ ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಎಸ್.ಡಿ.ಪಿ.ಐ ಸದಸ್ಯರು ಮನವಿ ಮಾಡಿದ್ದಾರೆ.

ಈ ಸಂದರ್ಭ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್, ಬಶೀರ್, ಮೇರಿ ವೇಗಸ್ ಮತ್ತು ನೀಮಾ ಅರ್ಷಾದ್ ಇದ್ದರು.



Join Whatsapp