AFSPA ವಿರುದ್ಧ ನಾಗಾಲ್ಯಾಂಡ್ ವಿಧಾನಸಭೆ ನಿರ್ಣಯ: ಪಾಪ್ಯುಲರ್ ಫ್ರಂಟ್ ಸ್ವಾಗತ

Prasthutha|

ನಾಗಾಲ್ಯಾಂಡ್ ಶಾಸಕಾಂಗ ಸಭೆಯು ಸಶಸ್ತ್ರ ಪಡೆ ವಿಶೇಷಾಧಿಕಾರ  ಕಾಯ್ದೆ (AFSPA)-1958 ಅನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿದ ನಿರ್ಧಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮ್ಯಾನ್ ಒ.ಎಮ್.ಎ. ಸಲಾಂ ಅವರು ತನ್ನ ಹೇಳಿಕೆಯಲ್ಲಿ ಸ್ವಾಗತಿಸಿದ್ದಾರೆ.

- Advertisement -

ದೇಶದಿಂದ ಕರಾಳ ಕಾನೂನನ್ನು ಹಿಂಪಡೆಯಬೇಕೆಂದು ಪಾಪ್ಯುಲರ್ ಫ್ರಂಟ್ ಸಂಘಟನೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

AFSPA ಕಾಯ್ದೆ ಅಡಿಯಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾದ ವಿಶೇಷ ಅಧಿಕಾರಗಳು ಈಶಾನ್ಯ ಪ್ರದೇಶ ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಮುಖ್ಯ ಅಸ್ತ್ರವಾಗಿದೆ. ಈ ಕಾಯ್ದೆಯನ್ವಯ ನಿರ್ಬಂಧಿತ ಸ್ಥಳಗಳಲ್ಲಿ ಭದ್ರತಾ ಪಡೆಗಳಿಗೆ ಅನುಮಾನದ ಆಧಾರದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಗುಂಡುಹಾರಿಸುವ,  ಬಂಧಿಸುವ, ವಾರಂಟ್ ಇಲ್ಲದೆ ಶೋಧಿಸುವ ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗಿತ್ತು ಮತ್ತು ಕಳೆದ ಐದು ದಶಕಗಳಲ್ಲಿ ನಾಗರಿಕರ ನಿಯಂತ್ರಣವಿಲ್ಲದ ಹತ್ಯೆಗಳು, ಬಂಧನಗಳಿಗೆ ಕಾರಣವಾಯಿತು. ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ಸಶಸ್ತ್ರ ಪಡೆಗಳು 14 ನಾಗರಿಕರನ್ನು ಕೊಂದ ಘಟನೆಯು ಈಶಾನ್ಯದಲ್ಲಿ ಅಮಾಯಕರ ಜೀವನದ ಮೇಲೆ ಕಾಯ್ದೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದಕ್ಕೆ ನೇರ ಉದಾಹರಣೆಯಾಗಿದೆ.

- Advertisement -

ಕಾಯ್ದೆಯನ್ನು ರದ್ದುಗೊಳಿಸುವ ಶಿಫಾರಸ್ಸನ್ನು 2005 ರಲ್ಲಿ ನ್ಯಾಯಮೂರ್ತಿ ಜೀವನ್ ರೆಡ್ಡಿ ಸಮಿತಿ ಮಾಡಿತ್ತು. ಈ ಸಮಿತಿಯು AFSPA ಕಾಯ್ದೆಯು ದ್ವೇಷ, ದಬ್ಬಾಳಿಕೆ ಮತ್ತು ದರ್ಪದ ಸಾಧನವಾಗಿದೆ” ಎಂದು ಉಲ್ಲೇಖಿಸಿತ್ತು.

AFSPA ರದ್ದುಗೊಳಿಸಲು ನಾಗಾಲ್ಯಾಂಡ್ ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಾಗತಿಸುತ್ತದೆ ಮತ್ತು ರಾಜ್ಯ ವಿಧಾನಸಭೆ ಸರ್ವಾನುಮತದಿಂದ ನಿರ್ಣಯಿಸಿದ ಬೇಡಿಕೆಯ ಕುರಿತು ಕೇಂದ್ರ ಸರ್ಕಾರ ತಕ್ಷಣ ತೀರ್ಮಾನ ಕೈಗೊಂಡು ಈಶಾನ್ಯ, ಜಮ್ಮು ಮತ್ತು ಕಾಶ್ಮೀರದಿಂದ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಲು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ.

Join Whatsapp