ಟೆಕ್ಸಾಸ್ : ಕೊರೊನಾ ವೈರಸ್‌ನ ರೂಪಾಂತರ ತಳಿ ಓಮಿಕ್ರಾನ್ ನಿಂದ ಸೋಂಕು ತಗುಲಿರುವ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.
ಓಮಿಕ್ರಾನ್ ನಿಂದ ಸಂಭವಿಸಿದ ಮೊದಲ ಸಾವು ಇದು ಎಂದು ಭಾವಿಸಲಾಗಿರುವುದಾಗಿ ಟೆಕ್ಸಾಸ್‌ನ ಆರೋಗ್ಯಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿಯಾಗಿದೆ.ಸಾವನ್ನಪ್ಪಿರುವ ವ್ಯಕ್ತಿಯನ್ನು ಲಸಿಕೆ ಪಡೆದುಕೊಳ್ಳದ 50 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು ಅನೇಕ ಖಾಯಿಲೆಗಳಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.
ಇಡೀ ಪ್ರಪಂಚದಲ್ಲಿಯೇ ಓಮಿಕ್ರಾನ್ ರೂಪಾಂತರಿ ಸೋಂಕು ಹರಡುತ್ತಿದ್ದು ವೈರಸ್ ಇಂಗ್ಲೆಂಡಿನಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಕೊವೀಡ್ ರೂಪಾಂತರಿಯಿಂದ ವಿಶ್ವದಾದ್ಯಂತ ಹೈ ಅಲರ್ಟ್ ಕ್ರಮ ಕೈಗೊಳ್ಳಲಾಗಿದೆ.ಈಗಾಗಲೇ ಭಾರತದಲ್ಲಿ ಸುಮಾರು 200 ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.