300ಕ್ಕೂ ಹೆಚ್ಚು ನಾಯಿಮರಿಗಳನ್ನು ಕೊಂದು ‘ಪ್ರತೀಕಾರ’ ತೀರಿಸಿಕೊಂಡ ಮಂಗಗಳು !

Prasthutha|

ಮಹಾರಾಷ್ಟ್ರ: ತಮ್ಮ ಗುಂಪಿನಲ್ಲಿದ್ದ ಮರಿಯೊಂದನ್ನು ನಾಯಿಗಳು ಕೊಂದುಹಾಕಿದ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಮಂಗಗಳ ಗುಂಪು, ಒಂದೇ ಗ್ರಾಮದಲ್ಲಿ 300ಕ್ಕೂ ಹೆಚ್ಚು ನಾಯಿ ಮರಿಗಳನ್ನು ಕೊಂದು ಹಾಕಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಮಜಲ್​’ಗಾಂವ್ ಗ್ರಾಮದಲ್ಲಿ ನಡೆದಿದೆ.

- Advertisement -

ಮಂಗಗಳ ‘ಪ್ರತೀಕಾರ’ ಭೀಕರ ರೂಪವನ್ನು ತಾಳಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಮಜಲ್​’ಗಾಂವ್ ಗ್ರಾಮದಲ್ಲಿ ಮಂಗನ ಮರಿಯೊಂದನ್ನು ನಾಯಿಗಳು ಕೊಂದಿದ್ದವು. ಒಂದು ಮಂಗನ ಮರಿಯನ್ನು ಕೊಂದ ಕಾರಣಕ್ಕೆ ಈಗ ಮಂಗಗಳ ಗುಂಪು ಶ್ವಾನ ಸಾಮ್ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆ. ಕಳೆದೊಂದು ವಾರದಿಂದ ಮಂಗಗಳು, ನಾಯಿ ಮರಿಗಳನ್ನು ಮರಗಳ ಮೇಲಿನಿಂದ ಹಾಗೂ ಕಟ್ಟಡಗಳ ಮೇಲಿನಿಂದ ಕೆಳಕ್ಕೆ ಎಸೆದು ಭೀಕರವಾಗಿ ಕೊಲ್ಲುತ್ತಿವೆ. ಈಗಾಗಲೇ 300ಕ್ಕೂ ಅಧಿಕ ನಾಯಿ ಮರಿಗಳು ಮಂಗಗಳ ಪ್ರತೀಕಾರ ದಾಹಕ್ಕೆ ಬಲಿಯಾಗಿದೆ. ಇಷ್ಟಾದರೂ ಮಂಗಗಳ ಸೇಡು ತಣ್ಣಗಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೋತಿಗಳ ಕಾಟದಿಂದ ದಿಕ್ಕುತೋಚದಂತಾಗಿರುವ ಗ್ರಾಮಸ್ಥರು ಮಂಗಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.  ಆದರೆ ಗ್ರಾಮಕ್ಕೆ ಬಂದಿದ್ದ ಸಿಬ್ಬಂದಿ ಕನಿಷ್ಠ ಒಂದೇ ಒಂದೂ ಮಂಗವನ್ನು ಹಿಡಿಯಲಾಗದೇ ಬರಿಗೈಲಿ ವಾಪಸ್ ತೆರೆಳಿದ್ದಾರೆ.



Join Whatsapp