ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ IUML ವಿರೋಧ: ವಿಸ್ತೃತ ಚರ್ಚೆಗೆ ಒತ್ತಾಯ

Prasthutha|

ಮಲಪ್ಪುರಂ: ಯುವತಿಯರ ಮದುವೆ ವಯಸ್ಸನ್ನು ಕನಿಷ್ಠ 18 ರಿಂದ 21 ಕ್ಕೆ ಏರಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML) ವಿರೋಧ ವ್ಯಕ್ತಪಡಿಸಿದ್ದು, ಸುದೀರ್ಘ ಚರ್ಚೆಯ ಅಗತ್ಯತೆಯ ಹಿನ್ನೆಲೆಯಲ್ಲಿ ಕಾಯ್ದೆ ಮಂಡಿಸುವುದನ್ನು ಮುಂದೂಡುವಂತೆ ಒತ್ತಾಯಿಸಿದೆ.

- Advertisement -

ಸರ್ಕಾರದ ಈ ನಿರ್ಧಾರವು ಮುಸ್ಲಿಮ್ ವೈಯಕ್ತಿಕ ಕಾನೂನಿಗೆ ವಿರುದ್ಧ ಮತ್ತು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪೂರ್ವಯೋಜಿತ ಕೃತ್ಯ ಎಂದು IUML ನಾಯಕರು ಆರೋಪಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕಾಯ್ದೆಯನ್ನು ಮುಂದೂಡುವಂತೆ ಅಬ್ದುಸ್ಸಮದ್ ಸಮದಾನಿ, ಪಿ ವಿ ಅಬ್ದುಲ್ ವಹಾಬ್ ಅವರೊಂದಿಗೆ ಸಂಸದ ಇ.ಟಿ. ಮುಹಮ್ಮದ್ ಬಶೀರ್ ಒತ್ತಾಯಿಸಿದ್ದಾರೆ.

- Advertisement -

ವಿವಾಹದ ಕಾನೂನುಬದ್ಧ ವಯಸ್ಸನ್ನು ಏರಿಸುವ ಸರ್ಕಾರದ ನಡೆಯನ್ನು IUML ವಿರೋಧಿಸುತ್ತದೆ. ಮುಸ್ಲಿಮ್ ವೈಯಕ್ತಿಕ ಕಾನೂನು ಸ್ಪಷ್ಟವಾಗಿ ಮದುವೆ, ವಿಚ್ಛೇದನೆ ಮತ್ತು ಆಸ್ತಿಯ ಹಕ್ಕನ್ನು ವಿವರಿಸಿದೆ. ಈ ಎಲ್ಲಾ ವಿಷಯಗಳನ್ನು ನಮ್ಮ ನಂಬಿಕೆಗೆ ಸೇರಿದ್ದು, ಕೇಂದ್ರ ಸರ್ಕಾರ ಸಾಂವಿಧಾನಿಕ ಹಕ್ಕನ್ನು ಕಸಿಯಲು ಯತ್ನಿಸುತ್ತಿದೆ ಎಂದು ಇ.ಟಿ. ಮುಹಮ್ಮದ್ ಬಶೀರ್ ಆರೋಪಿಸಿದ್ದಾರೆ.



Join Whatsapp