ಆ್ಯಂಡ್ರಾಯ್ಡ್‌ ದೋಷ ವರದಿ ಮಾಡಿದ ಭಾರತೀಯನಿಗೆ 5 ಸಾವಿರ ಡಾಲರ್ ಬಹುಮಾನ ಘೋಷಿಸಿದ ಗೂಗಲ್

Prasthutha|

ಯುಎಸ್‌ಎ : ಆಂಡ್ರಾಯ್ಡ್ ಫೋರ್‌ಗ್ರೌಂಡ್ ಸೇವೆಗಳಲ್ಲಿ ದೋಷವನ್ನು ಕಂಡುಹಿಡಿದು ವರದಿ ಮಾಡಿದ್ದಕ್ಕಾಗಿ ಗೂಗಲ್, ಭಾರತದ ರೋನಿ ದಾಸ್‌ ಅವರಿಗೆ ಬಹುಮಾನ ನೀಡಿದೆ. ಹ್ಯಾಕರ್‌ಗಳು ಫೋನ್‌ಗೆ ಪ್ರವೇಶಿಸಲು ಮತ್ತು ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸುಲಭವಾಗಿ ಬಳಸಿಕೊಳ್ಳಬಹುದಾದ ದೋಷವನ್ನು (Android Bug) ಅಸ್ಸಾಂ ಮೂಲದ ದಾಸ್ ಗೂಗಲ್‌ಗೆ ತಿಳಿಸಿದ್ದರು. ಈ ಬೆನ್ನಲ್ಲೇ ಗೂಗಲ್‌ನಿಂದ ಬಹುಮಾನವಾಗಿ $ 5,000, ಅಂದರೆ ಸರಿಸುಮಾರು 3.5 ಲಕ್ಷ ರೂ. ಮೊತ್ತವನ್ನು ರೋನಿ ಪಡೆದುಕೊಂಡಿದ್ದಾರೆ.

- Advertisement -

ಸೈಬರ್ ಸೆಕ್ಯೂರಿಟಿ ತಜ್ಞರಾಗಿರುವ ದಾಸ್, ಈ ವರ್ಷದ ಮೇ ತಿಂಗಳಲ್ಲಿ ಗೂಗಲ್‌ಗೆ ದೋಷವನ್ನು ವರದಿ ಮಾಡಿದ್ದರು. ಗೂಗಲ್ ಆಂಡ್ರಾಯ್ಡ್ ಸೆಕ್ಯುರಿಟಿ ಟೀಮ್‌ನ ಇಮೇಲ್ ಪ್ರಕಾರ, ದಾಸ್ ಅವರು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಅಪ್ಲಿಕೇಶನ್ ರಚಿಸುವಾಗ ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿದಾಗ ಆಂಡ್ರಾಯ್ಡ್ ಫೋರ್ಗ್ರೌಂಡ್ ಸೇವೆಗಳಲ್ಲಿ ಈ ದೋಷವನ್ನು ಕಂಡುಹಿಡಿದಿದ್ದರು.

“ನಿಮ್ಮ ಪ್ರಯತ್ನಗಳ ಗುರುತಿಸುವಿಕೆಯಾಗಿ, ನಾವು ನಿಮಗೆ $5000 ಬಹುಮಾನವನ್ನು ನೀಡಲು ಬಯಸುತ್ತೇವೆ. ನೀವು ಒದಗಿಸಿದ ಉತ್ತಮ-ಗುಣಮಟ್ಟದ ವರದಿ ಮತ್ತು ಅನುಸರಣಾ ಮಾಹಿತಿಗಾಗಿ ಧನ್ಯವಾದಗಳು ಎಂದು” ಎಂದು ಗೂಗಲ್‌ ಆ್ಯಂಡ್ರಾಯ್ಡ್‌ ಸೆಕ್ಯೂರಿಟಿ ತಂಡವು ದಾಸ್‌ಗೆ ಇಮೇಲ್‌ನಲ್ಲಿ ತಿಳಿಸಿದೆ.

Join Whatsapp