ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರಕಾರದ ಚಿಂತನೆ : ವೆಲ್ಫೇರ್ ಪಾರ್ಟಿ ವಿರೋಧ

Prasthutha|

ಬೆಂಗಳೂರು :ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ತರಲು ಮುಂದಾಗಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ರಾಜ್ಯದ ಜನತೆಯನ್ನು ವಂಚಿಸುವ ಮತ್ತು ಸದನದ ಸಮಯ ಹಾಗೂ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡುವ ಕ್ರಮವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ಖಂಡಿಸಿದರು.

- Advertisement -

ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಕೋವಿಡ್ ಹಾಗೂ ಅತಿ ವೃಷ್ಟಿಯಿಂದ ಹಾನಿಗೀಡಾದ ಜನರಿಗೆ ಅಗತ್ಯ ನೆರವು ನೀಡದೇ ಹೊಣೆ ಯಿಂದ ನುಣುಚಿಕೊಳ್ಳಲು ಮತಾಂತರ ಕಾಯ್ದೆ ಮುನ್ನೆಲೆಗೆ ತಂದಿದೆ. ದೇಶದ ಸಂವಿಧಾನ ಭಾರತ ಪ್ರಜೆಗಳು ಯಾವುದೇ ಮತವನ್ನು ಆಚರಿಸಲು ಅಥವಾ ಆಚರಿಸಿದಿರಲು ಹಕ್ಕು ನೀಡಿರುವಾಗ, ಮತಾಂತರ ನಿಷೇಧ ಕಾಯ್ದೆ ಅವಶ್ಯವಿಲ್ಲ. ಇದು ಸಂವಿ ಧಾನ ವಿರೋಧಿಯಾಗಿದೆ. ಸುಳ್ಳು ಆರೋಪಗಳನ್ನು ಹೊರಿಸಿ ಪುಂಡ, ಪೋಕರಿಗಳು, ಚರ್ಚುಗಳು, ಮಸೀದಿ , ಧಾರ್ಮಿಕ ಸಿಬ್ಬಂದಿ ಮೇಲೆ ದಾಳಿ ಮಾಡುತ್ತಿದ್ದು ಸರ್ಕಾರ ಬಲ ನೀಡುವಂತಿದೆ.ಕಳೆದ 12 ತಿಂಗಳಲ್ಲಿ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸತತ 38 ದಾಳಿಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸರ್ಕಾರವೇ ಮುಕ್ತ ಪರವಾನಗಿ ನೀಡಿದಂತಾಗುತ್ತದೆ. ಅಭಿವೃದ್ಧಿ ಬಿಟ್ಟು ಕೇವಲ ದ್ವೇಷದ ರಾಜಕಾರಣ ಮಾಡುತ್ತಿರುವ ಯು.ಪಿ ಮಾಡೆಲ್ ನಮಗೆ ಬೇಡ. ಆದ್ದರಿಂದ ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

- Advertisement -

ಕೇಂದ್ರ ಸರ್ಕಾರ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸು ಪಡೆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರೈತ ವಿರೋಧಿ ಕಾನೂನು ಜಾರಿಗೆ ಮುಂದಾಗಿದೆ. ಕೂಡಲೇ ರೈತರ ಕ್ಷಮೆ ಯಾಚಿಸಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದು ಪಡಿ ಕಾಯ್ದೆ ಕೂಡಲೇ ವಾಪಾಸ್ ಪಡೆ ಯಬೇಕು ಎಂದು ಒತ್ತಾಯಿಸಿದರು.



Join Whatsapp