ಮನಸ್ಸಾದಾಗ ರಾಜ್ಯಸಭೆಗೆ ತೆರಳುತ್ತೇನೆ ಎಂದಿದ್ದ ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಹಕ್ಕುಚ್ಯುತಿ ನೋಟಿಸ್

Prasthutha|

ನವದೆಹಲಿ: ನನಗೆ ಮನಸ್ಸಾದಾಗ ರಾಜ್ಯಸಭೆಯ ಕಲಾಪಕ್ಕೆ ತೆರಳುತ್ತೇನೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಸಂಸತ್ತಿನಲ್ಲಿ ಹಕ್ಕುಚ್ಯುತಿ ನೋಟಿಸ್ ಜಾರಿಗೊಳಿಸಲಾಗಿದೆ.

- Advertisement -

ತನ್ನ ಆತ್ಮಚರಿತ್ರೆ “ ಜಸ್ಟಿಸ್ ಫಾರ್ ಜಡ್ಜ್ ” ಗೆ ಸಂಬಂಧಿಸಿದಂತೆ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾಜಿ ಸಿಜೆಐ ರಂಜನ್ ಗೊಗೊಯ್, ನಾನು ಮನಸ್ಸಾದಾಗ ರಾಜ್ಯಸಭೆಯ ಕಲಾಪಕ್ಕೆ ತೆರಳುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ, ಮಾಜಿ ಸಿಜೆಐ ಅವರ ಹೇಳಿಕೆ ರಾಜ್ಯಸಭೆಯ ನಿಂದನೆ ಮತ್ತು ಸದನಕ್ಕೆ ತೋರಿದ ಅಗೌರವ ಎಂದು ಬಣ್ಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ.

- Advertisement -

ರಾಜ್ಯಸಭೆಯಲ್ಲಿ ಹಾಜರಾತಿ ಕಡಿಮೆ ಆಗಿರುವ ಕುರಿತು ಉತ್ತರಿಸಿದ ಟಿಎಂಸಿ ಇದು ನೋಟಿಸ್ ಜಾರಿಗೊಳಿಸಲು ಪ್ರಮುಖ ಕಾರಣವೆಂದು ಉಲ್ಲೇಖಿಸಿದೆ.



Join Whatsapp