ಅಬುಧಾಬಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ , ಯುಎಇಗೆ ಭೇಟಿ ನೀಡಿದ್ದು, ಉಭಯ ನಾಯಕರ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೇ ಮೊದಲ ಬಾರಿಗೆ ಯುಎಇ ಭೇಟಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಫ್ತಾಲಿ ಬೆನೆಟ್ ಅವರನ್ನು ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಿಯಾದ್ ಸ್ವಾಗತಿಸಿದರು.
ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಇಸ್ರೇಲ್ ಪ್ರಧಾನಿ, ಯುಎಇ ರಾಜಕುಮಾರ, ಸೇನಾ ಉಪದಂಡನಾಯಕ ಶೇಖ್ ಮುಹಮ್ಮದ್ ಬಿನ್ ಝಾಹಿದ್ ಅಲ್ ನೆಹ್ಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇರಾನ್ – ಇಸ್ರೇಲ್ ಸಂಘರ್ಷದ ಪರಿಸ್ಥಿತಿಯ ನಡುವೆ ಇಸ್ರೇಲ್ ಪ್ರಧಾನಿಯ ಯುಎಇ ಭೇಟಿ, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಈ ಮಧ್ಯೆ ಇರಾನ್ – ಇಸ್ರೇಲ್ ಹದಗೆಟ್ಟಿರುವ ರಾಜತಾಂತ್ರಿಕ ಸಂಬಂಧವನ್ನು ಮತ್ತೆ ಯಥಾಸ್ಥಿತಿಗೆ ತರುವ ನಿಟ್ಟಿವಲ್ಲಿ ಇಸ್ರೇಲ್ ಪ್ರಧಾನಿಯ ಯುಎಇ ಭೇಟಿ ಸಾಕಷ್ಟು ಮಹತ್ವದ ಪಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಯುಎಇ ರಕ್ಷಣಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಝಾಹಿದ್ ಅವರು ಇರಾನ್ ಅಧ್ಯಕ್ಷ ಇಬ್ರಾಹಿಮ್ ರೌಸಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.