ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲು ಸ್ವೀಡನ್‌ನಿಂದ ಮುಂಬೈಗೆ ಬಂದ ಬಾಲಕಿ!

Prasthutha: December 13, 2021

ಮುಂಬೈ: 16 ವರ್ಷದ ಸ್ವೀಡಿಷ್ ಬಾಲಕಿಯೊಬ್ಬಳು ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲು ಮುಂಬೈಗೆ ಆಗಮಿಸಿದ ಘಟನೆ ವರದಿಯಾಗಿದೆ.

19 ವರ್ಷದ ಯುವಕನನ್ನು ಭೇಟಿ ಮಾಡಲು ಮುಂಬೈಗೆ ಬಂದ ಬಾಲಕಿಯನ್ನು ಮುಂಬೈ ಪೊಲೀಸರು ಮಧ್ಯಪ್ರವೇಶಿಸಿ ಊರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್‌ ನಲ್ಲಿ ಬಾಲಕಿಯ ತಂದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಯುವತಿ ಸ್ವೀಡನ್‌ ನಿಂದ ನಾಪತ್ತೆಯಾಗಿದ್ದಾಳೆ ಎಂದು ಮುಂಬೈ ಪೊಲೀಸರಿಗೆ ಇಂಟರ್‌’ಪೋಲ್‌ನಿಂದ ಯೆಲ್ಲೋ ನೋಟೀಸ್ ಬಂದಿತ್ತು. ಬಾಲಕಿ ಭಾರತಕ್ಕೆ ಬಂದಿರುವ ಮಾಹಿತಿ ಸಿಕ್ಕ ಬಳಿಕ ದೇಶದೆಲ್ಲೆಡೆ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು.

ಇದರೊಂದಿಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯ ಇನ್‌ಸ್ಟಾಗ್ರಾಮ್ ಮಾಹಿತಿ ಆಧರಿಸಿ ಸ್ನೇಹಿತನನ್ನು ಪತ್ತೆ ಹಚ್ಚಿದ್ದಾರೆ.


ಬಾಲಕಿ ಮುಂಬೈನ ಚಿಟ್ ಕ್ಯಾಂಪ್ ನಲ್ಲಿದ್ದಾಳೆ ಎಂದು ಯುವಕ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ದಕ್ಷಿಣ ಮುಂಬೈನ ಡೋಂಗ್ರಿಯಲ್ಲಿರುವ ಚಿಲ್ಡ್ರೆನ್ಸ್ ಹೋಮ್ ನಲ್ಲಿ ಇರಿಸಿದ್ದರು.
ಬಾಲಕಿಯ ತಂದೆ ಮತ್ತು ಇತರರು ಸ್ವೀಡನ್‌ ನಿಂದ ಮುಂಬೈಗೆ ಬಂದು ಬಾಲಕಿಯೊಂದಿಗೆ ಊರಿಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!