ಚೀನಾದಲ್ಲಿ ಉಯಿಘರ್ ಮುಸ್ಲಿಮರ ವಿರುದ್ಧ ಹಿಂಸೆ: ಒಲಿಂಪಿಕ್ಸ್ ಬಹಿಷ್ಕರಿಸಿದ ಕೆನಡಾ

Prasthutha|

ಬೀಜಿಂಗ್ : ಚೀನಾದಲ್ಲಿನ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕರಿಸುವ ವಿಷಯದಲ್ಲಿ ಆಸ್ಟ್ರೇಲಿಯಾ, ಅಮೆರಿಕ ಮತ್ತು ಬ್ರಿಟನ್ ಜೊತೆ ನಿಲ್ಲುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೋಡೋ ಹೇಳಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣಕ್ಕೆ ಚೀನಾದ ಜೊತೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ಬಯಸಿರುವುದಾಗಿ ಅವರು ಹೇಳಿದರು.

- Advertisement -


ಫೆಬ್ರವರಿಯಲ್ಲಿ ಚೀನಾದಲ್ಲಿ ಚಳಿಗಾಲದ ಆಟೋಟಗಳು ನಡೆಯಲಿದ್ದು ಅದನ್ನು ಬಹಿಷ್ಕರಿಸಲು ಈ ನಾಲ್ಕು ದೇಶಗಳು ಸದ್ಯ ತೀರ್ಮಾನ ತೆಗೆದುಕೊಂಡಿವೆ. ಚೀನಾ ಸರಕಾರವು ಉಯಿಘರ್ ಮುಸ್ಲಿಮರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಹಾಂಗ್ ಕಾಂಗ್ ನ ಅರೆ ಸ್ವಾಯುತ್ತತೆಯನ್ನು ಕಸಿದುಕೊಳ್ಳುವ ಕಾಯಕದಲ್ಲಿ ತೊಡಗಿದೆ.


ಈ ಎಲ್ಲ ಹಿಂಸಾಚಾರಗಳಲ್ಲಿ ಚೀನಾದ ಅಮಾನವೀಯತೆ ಮೇರೆ ಮೀರಿದೆ ಎಂದು ಟ್ರೂಡೋ ಹೇಳಿದ್ದಾರೆ.
2018ರಲ್ಲಿ ಚೀನಾದ ಇಬ್ಬರು ಹೂವೈ ಟೆಕ್ನಾಲಜೀಸ್ ನವರನ್ನು ಗೂಢಚಾರಿಕೆ ಆರೋಪದ ಮೇಲೆ ಕೆನಡಾ ಬಂಧಿಸಿದ್ದಾಗಿನಿಂದ ಈ ಎರಡು ದೇಶಗಳ ನಡುವಣ ಸಂಬಂಧ ಹಳಸಿದೆ. ಚೀನಾ ಸಹ ಕೆನಡಾದವರನ್ನು ಬಂಧಿಸಿ ಸೇಡು ತೀರಿಸಿಕೊಂಡಿತ್ತು. ಕೆನಡಾದ ವಿದೇಶಾಂಗ ಮಂತ್ರಿ ಮೆಲಾನಿ ಜೋಲಿ ಅವರು ಸಹ ಬೇರೆ ದೇಶಗಳೂ ಇದೇ ಬಗೆಯ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.



Join Whatsapp