ವಿರಾಜಪೇಟೆ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಸಿಂಪಿ ಎಸಿಬಿ ಬಲೆಗೆ

Prasthutha|

ವಿರಾಜಪೇಟೆ : ರೋಗಿಯೊಬ್ಬನಿಂದ ಶಸ್ತ್ರ ಚಿಕಿತ್ಸೆಗಾಗಿ ಸರಕಾರಿ ವೈದ್ಯನೊಬ್ಬ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ. ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಸಿಂಪಿ ಇಂದು ಎಸಿಬಿ ದಾಳಿ ವೇಳೆ ಸೆರೆಸಿಕ್ಕಿದ್ದಾನೆ.

- Advertisement -

ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆಗೆ ಬಂದಿದ್ದ ರೋಗಿಯಿಂದ ವಿಶ್ವನಾಥ್ 5 ಸಾವಿರ ರೂ. ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ವೇಳೆ 2 ಸಾವಿರ ರೂ ಸ್ವೀಕರಿಸುವ ಸಂದರ್ಭ ಡಿವೈಎಸ್ಪಿ ಕ ಕೃಷ್ಣಕುಮಾರ್,ಎಸ್ ಐ ಕುಮಾರ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು , ವೈದ್ಯನನ್ನು ವಶಕ್ಕೆ ಪಡೆಯಲಾಗಿದೆ.

Join Whatsapp