ಶಾಲೆಗೆ ನುಗ್ಗಿ ವಿದ್ಯಾರ್ಥಿಗೆ ಬಲವಾಗಿ ಕಚ್ಚಿದ್ದ ಕೋತಿ ಸೆರೆ

Prasthutha|

ಬೆಂಗಳೂರು: ಶಾಲೆಯೊಂದಕ್ಕೆ ನುಗ್ಗಿ ಶಾಲಾ ವಿದ್ಯಾರ್ಥಿಯನ್ನು ಕಚ್ಚಿ ಗಾಯಗೊಳಿಸಿದ್ದ ಕೋತಿಯನ್ನು‌ ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಡೆದಿದೆ.

- Advertisement -


ರಾಮನಗರ ತಾಲೂಕಿನ ನಾಗೋಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕೋತಿಯ ದಾಳಿಗೆ ತುತ್ತಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಲಿಖಿತ್ (10) ಎಂದು ಗುರುತಿಸಲಾಗಿದೆ.

ಗಾಯಗೊಂಡ ಲಿಖಿತ್ ನನ್ನು ಮಂಡ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದೇ ರೀತಿ ಪದೇ ಪದೇ ವಿದ್ಯಾರ್ಥಿಗಳಿಗೆ ಕಾಟ ಕೊಡುತ್ತಿದ್ದ ಕೋತಿಯು ಗ್ರಾಮಸ್ಥರಿಗೂ ತೊಂದರೆ ಕೊಡುತ್ತಿತ್ತು. ಹೀಗಾಗಿ ಗ್ರಾಮಸ್ಥರು ಉಪಾಯ ಮಾಡಿ ಬೋನನ್ನು ಇಟ್ಟು ಕೋತಿಯನ್ನ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

Join Whatsapp