ನಾಗಾಲ್ಯಾಂಡ್‌ | ಭದ್ರತಾ ಪಡೆಗಳ ಗುಂಡೇಟಿಗೆ 13 ನಾಗರಿಕರು ಬಲಿ !

Prasthutha|

ಗುವಾಹಟಿ: ಭದ್ರತಾ ಪಡೆಗಳ ಗುಂಡೇಟಿಗೆ ನಾಗಾಲ್ಯಾಂಡ್‌ ನ 13 ನಾಗರಿಕರು ಬಲಿಯಾಗಿದ್ದಾರೆ. ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ಭದ್ರತಾ ಪಡೆಗಳು ಹೊಂಚು ಹಾಕಿ ಈ ದಾಳಿಯನ್ನು ನಡೆಸಿದೆ ಎಂದು ಸರ್ಕಾರೇತರ ಮೂಲಗಳು ತಿಳಿಸಿದೆ. ಘಟನೆಯ ಕುರಿತಾಗಿ ಇದೀಗ ನಾಗಲ್ಯಾಂಡ್‌ ನಾದ್ಯಂತ ಭದ್ರತಾ ಪಡೆಗಳ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ.

- Advertisement -

ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಮನೆಗೆ ಹಿಂತಿರುಗುತ್ತಿದ್ದ ವೇಳೆ ಉಗ್ರರೆಂದು ಭಾವಿಸಿ ಪ್ಯಾರಾ ಕಮಾಂಡೋಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯು ಶನಿವಾರ ಸಂಜೆ ವೇಳೆ ನಡೆದಿದ್ದು ಆರು ಮಂದಿ ಘಟನಾ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಗಂಭೀರ ಗಾಯಗೊಂಡಿದ್ದ ಏಳು ಮಂದಿ ಕಾರ್ಮಿಕರು ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

ಗುಂಡಿನ ದಾಳಿಯಲ್ಲಿ ಹದಿಮೂರು ನಾಗರಿಕರು ಹತ್ಯೆಗೀಡಾಗಿದ್ದಾರೆ. ಮತ್ತು 11 ನಾಗರಿಕರು ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ನಾಪತ್ತೆಯಾಗಿದ್ದಾರೆ ಎಂದು ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಬುಡಕಟ್ಟು ಸಮುದಾಯದ ಮುಖಂಡರೊಬ್ಬರು ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.



Join Whatsapp