ಗಾಂಜಾ ಅಮಲಿನಲ್ಲಿ ಪುಂಡಾಟ | ಅಪ್ರಾಪ್ತರ ಸೆರೆ

Prasthutha: December 5, 2021

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಗೂಂಡಾಗಿರಿ ನಡೆಸುತ್ತಿದ್ದ ಮೂವರು ಅಪ್ರಾಪ್ತ ಪುಂಡರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮತ್ತಿನಲ್ಲೇ ಇರುತ್ತಿದ್ದ ಬಂಧಿತ ಅಪ್ರಾಪ್ತರು ರಾತ್ರಿ ವೇಳೆ ಮನೆಗಳ ಮೇಲೆ ಕಲ್ಲೆಸೆಯುವುದು. ಬೈಕ್‌ಗಳನ್ನು ಅಡ್ಡಗಟ್ಟಿ ರಾಬರಿ ಮಾಡುವುದು. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿ ಪುಂಡಾಟ ಮಾಡುವುದು. ಹಗಲಿನ ವೇಳೆ ವೃದ್ಧರ ಮೇಲೆ ಲಾಂಗ್ ಬೀಸುವುದು. ಜನರ ಜೇಬಿನಲ್ಲಿ ಇದ್ದ ಹಣ ಎಗರಿಸಿ ಪರಾರಿಯಾಗುವುದು. ಬೇಕರಿಯ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡುವುದು. ಹೀಗೆ ಹಲವು ರೀತಿಯ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು.


ಅಪ್ರಾಪ್ತರು ಹಾವಳಿ ನಡೆಸುತ್ತಿರುವ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ಕೈಗೊಂಡ ಪುಲಕೇಶಿನಗರ ಪೊಲೀಸರು ‌ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಲವು ದಿನಗಳಿಂದ ‌ಆರೋಪಿಗಳು ಅಪರಾಧ ಕೃತ್ಯಗಳನ್ನು ‌ನಡೆಸಿ ಅದರಿಂದ ಬಂದ ಹಣದಲ್ಲಿ ಗಾಂಜಾ ಸೇವಿಸುತ್ತಾ‌ ಮೋಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!