ನವದೆಹಲಿ: ಕಳೆದ ಎರಡು ತಿಂಗಳಿನಿಂದ ಸಂಘಪರಿವಾರ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ಟ್ರಕ್ ಅಡ್ಡವಿಟ್ಟು ಮತ್ತೆ ಅಡ್ಡಿಪಡಿಸಿದ್ದು, ಇದರ ನಡುವೆಯೇ ಮುಸ್ಲಿಮರು ನಮಾಝ್ ನಿರ್ವಹಿಸಿದ ಘಟನೆ ಹರ್ಯಾಣದ ಗುರ್ಗಾಂವ್ ನಿಂದ ವರದಿಯಾಗಿದೆ.
ಶುಕ್ರವಾರದ ನಮಾಝ್ ಗೆ ಮುಸ್ಲಿಮರು ಸಜ್ಜಾಗುತ್ತಿದ್ದಂತೆ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕೀ ಜೈ ಘೋಷಣೆಗಳೊಂದಿಗೆ ಆಗಮಿಸಿ ನಮಾಝ್ ಗೆ ಮತ್ತೆ ಅಡ್ಡಿಪಡಿಸಿದರು.
ಪ್ರಸಕ್ತ ಈ ಸ್ಥಳದಲ್ಲಿ ಸಂಘಪರಿವಾರ ಮತ್ತು ಸ್ಥಳೀಯರು ಸತತ ಮೂರನೇ ಬಾರಿಗೆ ನಮಾಝ್ ಗೆ ಅಡ್ಡಿಪಡಿಸುತ್ತಿದ್ದಾರೆ.
ಸೆಕ್ಟರ್ 47 ರಲ್ಲಿ ನಮಾಝ್ ನಿರ್ವಹಣೆಯ ವಿರುದ್ಧ ಪ್ರತಿಭಟನೆ ನಡೆಸಿದ ಭಾರತ್ ಮಾತಾ ವಾಹಿನಿಯ ಮುಖ್ಯಸ್ಥ ದಿನೇಶ್ ಠಾಕೂರ್ ಸೇರಿದಂತೆ ಕನಿಷ್ಠ ಏಳು ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಮುಸ್ಲಿಮರು ನಮಾಝ್ ನೆಪದಲ್ಲಿ ಭೂ ಜಿಹಾದ್ ನ ಪಿತೂರಿ ನಡೆಸುತ್ತಿದ್ದಾರೆ ಎಂದು ಬಂಧಿತ ಠಾಕೂರ್ ಠಾಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ದೂರಿದ್ದಾರೆ.
ಸಂಘಪರಿವಾರದ ಪ್ರತಿಭಟನೆಗೆ ಸಡ್ಡು ಹೊಡೆದು ಸುಮಾರು 15 ಮುಸ್ಲಿಮರು ನಮಾಝ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಘಪರಿವಾರ ನಮಾಝ್ ವಿರೋಧಿಸಿ ಪ್ರಚೋದನಕಾರಿ ಘೋಷಣೆ ಕೂಗಿ ನಮಾಝ್ ಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸದ್ಯ ಶುಕ್ರವಾರದ ನಮಾಝ್ ಗೆ ಅಡ್ಡಿ ಪಡಿಸಿದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.