ವಾಂಖೆಡೆಯಲ್ಲಿ ಶುಕ್ರವಾರದಿಂದ ಅಂತಿಮ ಟೆಸ್ಟ್: ಮೊದಲ ದಿನ ಮಳೆ ಅಡ್ಡಿ ಸಾಧ್ಯತೆ

Prasthutha|

ಮುಂಬೈ: ನ್ಯೂಜಿಲೆಂಡ್ ವಿರುದ್ಧದ 2ನೇ ಹಾಗೂ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಸರಣಿ ಗೆಲ್ಲಲು ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ವಾಂಖಡೆ ಪಿಚ್ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾಗುವ ಸೂಚನೆಯನ್ನು ಕ್ಯಯುರೇಟರ್’ಗಳು ನೀಡಿದ್ದು, ಅಶ್ವಿನ್-ಜಡೇಜಾ-ಅಕ್ಷರ್ ಜೋಡಿ ಮೋಡಿ ಮಾಡುವ ನಿರೀಕ್ಷೆಯಿದೆ.

- Advertisement -

ಪಂದ್ಯಕ್ಕೆ ವರುಣನ ಅವಕೃಪೆ ?
ದಕ್ಷಿಣ ಮುಂಬೈನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಬುಧವಾರ ಉಭಯ ತಂಡಗಳ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿತ್ತು. ಹವಾಮಾನ ವರದಿಯ ಪ್ರಕಾರ, ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಬಲ ತುಂಬಲಿದೆ ಕೊಹ್ಲಿ ಆಗಮನ

- Advertisement -

ಟಿ-20  ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಎರಡನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಆದರೆ ಕೊಹ್ಲಿಗಾಗಿ ಆಡುವ ಬಳಗದಿಂದ ಯಾರನ್ನು ಕೈಬಿಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಅಥವಾ ಚೇತೇಶ್ವರ ಪೂಜಾರ, ಕೊಹ್ಲಿಗಾಗಿ ಸ್ಥಾನ ಬಿಟ್ಟುಕೊಡಬೇಕಾಗಬಹುದು.

ಕಾನ್ಪುರ ಟೆಸ್ಟ್‌ನಲ್ಲಿ ಹಂಗಾಮಿ ನಾಯಕ ಮತ್ತು ಉಪನಾಯಕರಾಗಿದ್ದ ರಹಾನೆ ಮತ್ತು ಪೂಜಾರ, ಕಳೆದ ಡಬ್ಲ್ಯುಟಿಸಿ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಿಂದಲೂ ರನ್‌’ಬರ ಎದುರಿಸುತ್ತಿದ್ದಾರೆ. ಆದರೂ ಕೋಚ್ ದ್ರಾವಿಡ್ ಇವರಿಬ್ಬರ ಮೇಲೆ ವಿಶ್ವಾಸವಿರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡ ಆಯ್ಕೆ ವಿಳಂಬ?
ಕೋವಿಡ್-19 ಹೊಸ ರೂಪಾಂತರಿ ಒಮಿಕ್ರಾನ್ ಆತಂಕದಿಂದಾಗಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅನಿಶ್ಚಿತತೆಯಲ್ಲಿದೆ. ಟೀಮ್ ಇಂಡಿಯಾ ಪ್ರವಾಸಕ್ಕೆ ಕೇಂದ್ರ ಸರ್ಕಾರದ ಅನುಮತಿ ಇನ್ನೂ ದೊರತಿಲ್ಲ. ಹೀಗಾಗಿ ಡಿಸೆಂಬರ್ 8 ಅಥವಾ 9ರಂದು ನಿಗದಿಯಾಗಿರುವ ಭಾರತ ತಂಡ ಪ್ರಯಾಣ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಇದರಿಂದ ಪಂದ್ಯಗಳ ವೇಳಾಪಟ್ಟಿಯನ್ನೂ ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.



Join Whatsapp