65ನೇ ವಯಸ್ಸಿನಲ್ಲಿ ಮದುವೆ: ಪ್ರೇಯಸಿಗಾಗಿ ಕಾದಿದ್ದು 35 ವರ್ಷ !

Prasthutha|

ಮಂಡ್ಯ: ಪ್ರೀತಿಸಿದಾಕೆಯನ್ನು ಜೀವನ ಸಂಗಾತಿಯನ್ನಾಗಿಸಲು ಕೆಲವೊಮ್ಮೆಯಾವ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂಬ ಮಾತಿದೆ. ಆದರೆ ಇಲ್ಲೊಬ್ಬ ವೃದ್ಧ, ತನ್ನ ಪ್ರೇಯಸಿಗಾಗಿ ಬರೋಬ್ಬರಿ 35 ವರ್ಷಗಳ ಕಾಲ ಕಾದಿದ್ದಾನೆ. 65ನೇ ವಯಸ್ಸಿನಲ್ಲಿ ಕೊನೆಗೂ 58 ವರ್ಷದ, ತನ್ನ ಪ್ರೇಯಸಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ.

- Advertisement -

ಈ ಅಪರೂಪದ ಪ್ರೇಮ ವಿವಾಹ ನಡೆದಿರುವುದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ಜೋಡಿಯ ಹೆಸರು ಚಿಕ್ಕಣ್ಣ ಮತ್ತು ಜಯಮ್ಮ. ಇಳಿವಯಸ್ಸಿನ ವೃದ್ಧಜೋಡಿ ಹಸೆಮಣೆ ಏರಿದ ಫೋಟೋ ಇದೀಗ ವೈರಲ್​ ಆಗಿದೆ.

ಅತ್ತೆ ಮಗಳಾದ ಜಯಮ್ಮಾಳನ್ನು ಚಿಕ್ಕಣ್ಣನ ಪ್ರೀತಿಸುತ್ತಿದ್ದ ವಿಷಯ ಮನೆಯವರಿಗೆ ಗೊತ್ತಿತ್ತು. ಆದರೆ ಚಿಕ್ಕಣ್ಣ ಕೂಲಿ ಕೆಲಸ ಮಾಡುತ್ತಿದ್ದ ಎಂಬ ಕಾರಣಕ್ಕೆ ಜಯಮ್ಮಾಳನ್ನು ಕೊಟ್ಟು ಮದುವೆ ಮಾಡಿಸಲು ಮನೆಯವರು ಒಪ್ಪಿರಲಿಲ್ಲ. ಹೀಗಾಗಿ 30 ವರ್ಷಗಳ ಹಿಂದೆ ಬೇರೆ ಮದುವೆ ಮಾಡಿಸಿದ್ದರು. ಜಯಮ್ಮರನ್ನು ಗಂಡ ಬಿಟ್ಟು ಹೋಗಿದ್ದ.

- Advertisement -

ಇತ್ತ ಚಿಕ್ಕಣ್ಣ ಜಯಮ್ಮಾಳ ನೆನಪಲ್ಲೇ ದಿನದೂಡುತ್ತಿದ್ದ. ಆಕೆಯ ನೆನಪಲ್ಲೇ ಬರೋಬ್ಬರಿ 35 ವರ್ಷ ಕಳೆದಿದ್ದಾರೆ. ಕೊನೆಗೂ ಜಯಣ್ಣರ ಪ್ರೀತಿಗೆ ಗೆಲುವಾಗಿದೆ. 35 ವರ್ಷದ ನಂತರ ಲವ್ ಸಕ್ಸಸ್ ಆಗಿದೆ. ಇವರಿಬ್ಬರೂ ಪರಸ್ಪರ ಒಪ್ಪಿ ಮೇಲುಕೋಟೆ ಶ್ರೀ ಚೆಲುವರಾಯಸ್ವಾಮಿ ದೇವಾಲಯ ‌ಮುಂಭಾಗದ ಶ್ರೀನಿವಾಸ್ ಗುರುಜೀ ಆಶ್ರಮದಲ್ಲಿ ಗುರುವಾರ ವಿವಾಹವಾಗಿದ್ದಾರೆ.

Join Whatsapp