ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರ ಒಪ್ಪತಕ್ಕದ್ದಲ್ಲ : ಅಲಹಾಬಾದ್ ಹೈಕೋರ್ಟ್

Prasthutha|

ಲಖನೌ : ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರ ಆಗುವುದು ಒಪ್ಪತಕ್ಕದ್ದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ತಮ್ಮ ಮದುವೆ ಬಳಿಕ ಮೂರು ತಿಂಗಳ ರಕ್ಷಣೆ ನೀಡುವಂತೆ ಮನವಿ ಮಾಡಿದ ಜೋಡಿಯೊಂದರ ಅರ್ಜಿಗೆ ಮಧ್ಯಪ್ರವೇಶಿಸಲು ನಿರಾಕರಿಸುತ್ತಾ ಕೋರ್ಟ್ ಈ ತೀರ್ಪು ನೀಡಿದೆ.

- Advertisement -

ಹಿಂದೂ ವ್ಯಕ್ತಿಯ ಜೊತೆ ವಿವಾಹವಾಗುವುದಕ್ಕೆ ಒಂದು ತಿಂಗಳ ಮುಂಚೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮುಸ್ಲಿಂ ಮಹಿಳೆಯೊಬ್ಬರು ಈ ಅರ್ಜಿ ಸಲ್ಲಿಸಿದ್ದರು. ತಮ್ಮ ವಿವಾಹದಲ್ಲಿ ಹೆತ್ತವರು ಮಧ್ಯಪ್ರವೇಶಿಸದಂತೆ ನಿರ್ದೇಶಿಸಲು ಕೋರಿ ಅರ್ಜಿ ದಾಖಲಿಸಲಾಗಿತ್ತು.

ಅರ್ಜಿಯಲ್ಲಿ ನೀಡಲಾದ ಮಾಹಿತಿ ಪ್ರಕಾರ, ಅರ್ಜಿದಾರ ಮಹಿಳೆಯು 29-06-2020ರಂದು ಮತಾಂತರಗೊಂಡಿದ್ದರು ಮತ್ತು 31-07-2020ರಂದು ವಿವಾಹವಾಗಿತ್ತು. ಇದನ್ನು ಗಮನಿಸಿರುವ ಕೋರ್ಟ್, ಇದು ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದೆ. 2014ರಲ್ಲಿ ಇಂತಹುದೇ ತೀರ್ಪು ನೀಡಿರುವ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.



Join Whatsapp