ಬಿಜೆಪಿಯನ್ನು ವಿರೋಧಿಸುವವರು ಒಗ್ಗಟ್ಟಾಗಬೇಕು: ಮಮತಾ ಭೇಟಿ ಬಳಿಕ ಶರದ್ ಪವಾರ್

Prasthutha|

ಮುಂಬೈ: ‘ಬಿಜೆಪಿಯನ್ನು ವಿರೋಧಿಸುವ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಂದುಗೂಡಬೇಕು ಮತ್ತು ಸಾಮೂಹಿಕ ನಾಯಕತ್ವ ರಚಿಸಬೇಕು’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

- Advertisement -

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪವಾರ್, ಕಾಂಗ್ರೆಸ್ ಇರಲಿ, ಅಥವಾ ಇತರೆ ಯಾವುದೇ ಪಕ್ಷ ಇರಲಿ, ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದ ಮೈತ್ರಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪವಾರ್, ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ನಮ್ಮೊಂದಿಗೆ ಸೇರಲು ಸ್ವಾಗತ. ಯಾರನ್ನೂ ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದರು.

- Advertisement -

“ನಾವು ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಬಿಜೆಪಿಗೆ ಬಲವಾದ ಪರ್ಯಾಯವನ್ನು ಒದಗಿಸುವ ಅಗತ್ಯವನ್ನು ಚರ್ಚಿಸಿದ್ದೇವೆ. ಈ ಹಂತದಲ್ಲಿ ನಾಯಕತ್ವದ ಪ್ರಶ್ನೆ ಬರುವುದಿಲ್ಲ, ನಾವು ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ” ಎಂದು ಪವಾರ್ ಹೇಳಿದರು.

ಇನ್ನೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧ್ಯಕ್ಷರಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, “ಈಗ ಯುಪಿಎ ಇಲ್ಲ” ಎಂದರು.



Join Whatsapp