ಮೈಸೂರು: ಸಂಘಟಕರಿಗೆ ಬೆದರಿಕೆವೊಡ್ಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಸ್ಟ್ಯಾಂಡ್ ಅಫ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಲಾವಿದ ಕುನಾಲ್ ಕಮ್ರಾ ಆರೋಪಿಸಿದ್ದಾರೆ.
ಮುಂಬೈ ಮೂಲದ ಸ್ಟ್ಯಾಂಡ್ ಅಫ್ ಕಲಾವಿದ ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮವನ್ನು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ಕಮ್ರಾ ಅವರ ಕಾರ್ಯಕ್ರಮವನ್ನು ಕೂಡ ಬಲಪಂಥೀಯ ಸಂಘಟನೆಯ ಕಾರ್ಯಕರ್ತರ ಬೆದರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದಾರೆ. ಮಾತ್ರವಲ್ಲ ಕಮ್ರಾ ಅವರನ್ನು ವಿವಾದಾತ್ಮಕ ವ್ಯಕ್ತಿ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ಟೀಕಿಸಿದ್ದ ಕಮ್ರಾ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ನಡೆಯನ್ನು ಅಭಿಮಾನಿಗಳು ಮತ್ತು ವಿರೋಧಿಗಳು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.