7.5 ಕೆ.ಜಿ. ತೂಕದ ಅಂಡಾಶಯ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಫೊರ್ಟಿಸ್ ವೈದ್ಯರು

Prasthutha|

ಬೆಂಗಳೂರು: ಮಹಿಳೆಯ ಅಂಡಾಶಯದಲ್ಲಿ ಪತ್ತೆಯಾದ ಬರೋಬ್ಬರಿ 7.5 ಕೆ.ಜಿ. ತೂಕದ ಗಡ್ಡೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆರವುಗೊಳಿಸಿದೆ.

- Advertisement -

ಸ್ತೀರೋಗ ಶಾಸ್ತ್ರ ಹಿರಿಯ ಸಲಹೆಗಾರರಾದ ಮನೀಶಾ ಸಿಂಗ್ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.


ಈ ಕುರಿತು ಮಾತನಾಡಿದ ವೈದ್ಯೆ ಡಾ. ಮನೀಶಾ ಸಿಂಗ್, 43 ವರ್ಷದ ಮಹಿಳೆಯೊಬ್ಬರು ಹೊಟ್ಟೆ ಉಬ್ಬಸದ ಆರೋಗ್ಯ ಸಮಸ್ಯೆ ಹೊಂದಿದ್ದರು. ಕೇವಲ 6 ತಿಂಗಳಲ್ಲಿ ಅವರ ಹೊಟೆಯು ಊದಿದಂತಾಗಿದೆ. ಅವರನ್ನು ಅಲ್ಟ್ರಾಸೌಂಡ್‌ಗೆ ಒಳಪಡಿಸಿದ ಬಳಿಕ ಅವರ ಹೊಟ್ಟೆಯಲ್ಲಿ 28*25 ಸೆ.ಮೀ ಅಳತೆಯ 7.5 ಕೆ.ಜಿ. ತೂಕದ ಗಡ್ಡೆ ಬೆಳೆದು ನಿಂತಿತ್ತು. ಇದನ್ನ ಹಾಗಿಯೇ ಬಿಟ್ಟಿದ್ದರೆ ಅಂಡಾಶಯ ಕ್ಯಾನ್ಸಗೆ ಕಾರಣವಾಗುವ ಸಾಧ್ಯತೆ ಹೆಚ್ಚಿತ್ತು. ಅಷ್ಟರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಗಡ್ಡೆ ಹೊರ ತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಕೇವಲ 4 ದಿನಗಳಲ್ಲಿ ಮಹಿಳೆಯು ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂದರು.

- Advertisement -


ಇಂಥಹ ಪ್ರಕರಣಗಳು ವಿರಳ. ಆದರೆ, ಮಹಿಳೆಯರು ಕೇವಲ ಬೊಜ್ಜು ಎಂದು ಕಡೆಗಣಿಸದೇ ಆಗಾಗ್ಗೇ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ತಾವು ದಪ್ಪವಿರಲು ಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

Join Whatsapp