ಅಪ್ರಾಪ್ತ ಬಾಲಕಿ ಮೇಲೆ ಪಾದ್ರಿಯಿಂದ ಅತ್ಯಾಚಾರ| ಶಿಕ್ಷೆ ಪ್ರಮಾಣ ಕಡಿತಗೊಳಿಸಿದ ಹೈಕೋರ್ಟ್

Prasthutha|

ಕೊಚ್ಚಿ: ಕೇರಳದ ಕೊಟ್ಟಿಯೂರ್ ನ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ ಪಾದ್ರಿ ರಾಬಿನ್ ವಡಕ್ಕಂಜೇರಿಗೆ ವಿಧಿಸಲಾಗಿದ್ದ ಶಿಕ್ಷೆ ಪ್ರಮಾಣವನ್ನು ಹೈಕೋರ್ಟ್ ಕಡಿಮೆ ಮಾಡಿದೆ.

- Advertisement -

ವಿಚಾರಣಾ ನ್ಯಾಯಾಲಯವು ಹಿಂದೆ ವಿಧಿಸಿದ್ದ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ಗಳ ದಂಡವನ್ನು ಕಡಿಮೆ ಮಾಡಿದ್ದು, 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.


ವಿಚಾರಣಾ ನ್ಯಾಯಾಲಯ ವಿಧಿಸಿದ್ದ ತೀರ್ಪಿನ ವಿರುದ್ಧ ರಾಬಿನ್ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾರಾಯಣ ಪಿಶಾರಡಿ ಅವರನ್ನೊಳಗೊಂಡ ಪೀಠವು ಅರ್ಜಿಯಲ್ಲಿ ವಿವರವಾದ ವಾದಗಳನ್ನು ಆಲಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ವಡಕ್ಕಂಜೇರಿ ವಿರುದ್ಧ ವಿವಿಧ ಸೆಕ್ಷನ್ ಗಳನ್ನು ಹಾಕಲಾಗಿತ್ತು.

- Advertisement -

ಫೋಕ್ಸೋ ಮತ್ತು ಅತ್ಯಾಚಾರ ಪ್ರಕರಣವನ್ನು ಎತ್ತಿಹಿಡಿದ ನ್ಯಾಯಾಲಯವು ಸಂಸ್ಥೆಯ ಮುಖ್ಯಸ್ಥರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ತೆಗೆದುಹಾಕಿದ್ದು,
ಈ ಹಿನ್ನೆಲೆಯಲ್ಲಿ ರಾಬಿನ್ ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.



Join Whatsapp