ಘಾಝಿಯಾಬಾದ್: ಇಲ್ಲಿನ ಲೋನಿಯಲ್ಲಿ ಇತ್ತೀಚೆಗೆ ಪೊಲೀಸ್ ಅತ್ಯಾಚಾರಕ್ಕೆ ತುತ್ತಾಗಿರುವವರ ಮನೆಗಳಿಗೆ ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐ(ಎಂ) ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ನೇತೃತ್ವದ ಪಕ್ಷದ ನಿಯೋಗ ಭೇಟಿ ಮಾಡಿ ಸಾಂತ್ವನ ಹೇಳಿದೆ.
ನಿಯೋಗದ ಹೋಗಿ ಬಂದ ಮೇಲೆ ಅಲ್ಲಿನ ಬಿಜೆಪಿ ಶಾಸಕ ʻʻಬೃಂದಾ ಕಾರಟ್ ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ “ಗೋವಧೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ” ಎಂದು ಅವರ ವಿರುದ್ಧ ಸುಳ್ಳು ಮತ್ತು ಕೆಟ್ಟ ಭಾವನೆ ಹರಡಿಸುವ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ, ಇದನ್ನು ಖಂಡಿಸುತ್ತ ಅದು ಈ ಆಪಾದನೆಗಳನ್ನು ತಿರಸ್ಕರಿಸಿದೆ.
ಲೋನಿಯಲ್ಲಿ ಪೊಲೀಸರು ಎನ್ ಕೌಂಟರ್ ಎಂದು ಹೇಳಿರುವ ಒಂದು ಘಟನೆಯಲ್ಲಿ ಏಳು ಯುವಕರನ್ನು ಒಂದೇ ರೀತಿಯಲ್ಲಿ ಗಾಯಗೊಳಿಸಲಾಗಿದೆ ಮತ್ತು ಇವರೆಲ್ಲರೂ ಮುಸ್ಲಿಮರು. ಇದಕ್ಕಾಗಿ ಪೊಲೀಸರ ಮೇಲೆ ಪ್ರಕರಣ ದಾಖಲಿಸುವ ಬದಲು ಈ ಏಳು ಯುವಕರನ್ನೇ ಲಾಕಪ್ಪಿನಲ್ಲಿ ಹಾಕಲಾಗಿದೆ. ಅತ್ಯಂತ ಕೋಮುವಾದಿ ಆಧಾರದಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ಬೆಂಬಲಿಸುವ ಕಾವಲುಕೋರ ಗುಂಪುಗಳಿಗೆ ನೇತೃತ್ವ ಕೊಡುತ್ತಿರುವ ಲೋನಿಯ ಶಾಸಕ ಈಗ ಸಂತ್ರಸ್ತರ ಪರವಾಗಿ ನಿಲ್ಲುವವವರನ್ನು ಹೆದರಿಸುವ, ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಒಂದು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬ ಸಿಪಿಐ(ಎಂ)ನ ಆಗ್ರಹವನ್ನು ಪುನರುಚ್ಚರಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ನ್ಯಾಯ ಸಿಗದಂತೆ ಮಾಡಲು ಕೆಲಸ ಮಾಡುತ್ತಿರುವ ಎಲ್ಲರ ಮೇಲೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.