ಯುಎಇಯಲ್ಲಿ ದ್ವೇಷ ಹರಡುವ ವಲಸಿಗರಿಗೆ ತಕ್ಕ ಶಾಸ್ತಿ: ರಾಜಕುಮಾರಿ ಹೆಂದ್ ಬಿಂತ್ ಫೈಸಲ್

Prasthutha|

ಶಾರ್ಜಾ: ಸಾಮಾಜಿಕ ಜಾಲಾತಾಣಗಳಲ್ಲಿ ದ್ವೇಷವನ್ನು ಹರಡುವ ಅನಿವಾಸಿಯರ ವಿರುದ್ಧ ತಕ್ಕ ಪಾಠ ಕಲಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಕುಮಾರಿ ಹೆಂದ್ ಬಿಂತ್ ಫೈಸಲ್ ಅಲ್ ಖಾಸಿಮ್ ಸಿದ್ಥತೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಇತ್ತೀಚೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ಲಾಮೋಫೋಬಿಯಾ ವಿಷಯಕ್ಕೆ ಸಂಬಂಧಿಸಿದ ಪೋಸ್ಟ್ ಮಾಡುವ ಜನರನ್ನು ಪತ್ತೆಹಚ್ಚಲು ಏಂಜಲ್ಸ್ ಆಫ್ ಮರ್ಸಿ ಎಂಬ ತಂಡ ರಚಿಸಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ನಾವು ಏಂಜೆಲ್ಸ್ ಆಫ್ ಮರ್ಸಿಯ ಮೂಲಕ ಇಸ್ಲಾಮ್ ವಿರೋಧಿ ನಿಲುವನ್ನು ತಾಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಮಾತ್ರವಲ್ಲ ಅಂತಹವರನ್ನು ದೇಶದಿಂದ ಗಡಿಪಾರು ಮಾಡುತ್ತೇವೆ. ಇಂತಹ ಪೋಸ್ಟ್ ಅನ್ನು ಹಂಚುವ ಜನರ ಮೇಲೆ ಕೂಡ ನಿಗಾ ವಹಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು.

ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸಿ ಪ್ರತಿಕ್ರಿಸಿದ ಅವರು ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣದ ನಡುವೆ ಭಾರೀ ಅಂತರವಿದೆ. ವಾಕ್ ಸ್ವಾತಂತ್ರ್ಯವು ಚರ್ಚೆಯನ್ನು ಉಲ್ಲೇಖಿಸಿದರೆ, ದ್ವೇಷದ ಮಾತು ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದರು.

- Advertisement -


ಇತ್ತೀಚೆಗೆ ರಾಜಕುಮಾರಿ ಹೆಂದ್, ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಎಂಬಾತನನ್ನು ಅಂತಾರಾಷ್ಟ್ರೀಯ ಸೆಮಿನಾರ್ ಗೆ ಆಹ್ವಾನಿಸದಂತೆ ಅಬುಧಾಬಿ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಒತ್ತಡ ಹೇರಿ ಅತ್ಯತ್ತಮ ಪ್ರಯತ್ನ ಮಾಡಿದ್ದರು.

Join Whatsapp