ಸ್ಯಾನ್ ಫ್ರಾನ್ಸಿಸ್ಕೊ: ಪ್ರಸಿದ್ಧ ಜಾಲತಾಣ ಟ್ವಿಟ್ಟರ್ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಒಪ್ಪಿಗೆ ಇಲ್ಲದೆ ಇತರರ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ ಅನುಮತಿ ಇಲ್ಲದೆ ಪೋಸ್ಟ್ ಮಾಡಲಾಗಿರುವ ತಮ್ಮ ಚಿತ್ರಗಳು ಅಥವಾ ವಿಡಿಯೊಗಳನ್ನು ತೆಗೆದುಹಾಕಲು ಟ್ವಿಟ್ಟರ್ ಗೆ ಮನವಿ ಸಲ್ಲಿಸಬಹುದು.
‘ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು, ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಟ್ವಿಟ್ಟರ್ ನಲ್ಲಿ ಇಂತಹಾ ಧೋರಣೆ ವ್ಯಾಪಕವಾಗುತ್ತಿದೆ ಎಂದು ಕಂಪೆನಿ ಕಳವಳ ವ್ಯಕ್ತಪಡಿಸಿದೆ.
ಈ ನೀತಿಯು ‘ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಹಂಚಿಕೊಂಡ ಟ್ವೀಟ್ ಪಠ್ಯ ಅಥವಾ ಸಾರ್ವಜನಿಕ ಚರ್ಚೆಗೆ ಮೌಲ್ಯವನ್ನು ಸೇರಿಸುವ ಕಂಟೆಂಟ್ಗಳಿಗೆ ಅನ್ವಯಿಸುವುದಿಲ್ಲ. ಬಳಕೆದಾರರು ಯಾವುದೇ ಕಂಟೆಂಟ್ ಹಂಚಿಕೊಂಡಾಗಲೂ ನಾವು ಪರಿಶೀಲನೆ ನಡೆಸಲು ಪ್ರಯತ್ನಿಸುತ್ತೇವೆ’ ಎಂದು ಟ್ವಿಟ್ಟರ್ ಹೇಳಿದೆ.