ಭೀಮಾ ಕೋರೆಗಾಂವ್ ಪ್ರಕರಣ: ಕೊನೆಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಗೆ ಜಾಮೀನು

Prasthutha|

ಮುಂಬೈ: ಭೀಮಾ ಕೋರೆಗಾಂವ್ – ಎಲ್ಗರ್ ಪರಿಷತ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.

- Advertisement -


ಆದಾಗ್ಯೂ, ಇತರ 8 ಮಂದಿ ಆರೋಪಿಗಳಾದ ಸುಧೀರ್ ದವಾಲೆ, ಡಾ.ಪಿ.ವರವರ ರಾವ್, ರೋನಾ ವಿಲ್ಸನ್, ವಕೀಲ ಸುರೇಂದ್ರ ಗಾಡ್ಲಿಂಗ್, ಪ್ರೊಫೆಸರ್ ಶೋಮಾ ಸೇನ್, ಮಹೇಶ್ ರಾವುತ್, ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಇವರೆಲ್ಲರನ್ನೂ 2018 ರ ಜೂನ್ – ಆಗಸ್ಟ್ ನಡುವೆ ಬಂಧಿಸಲಾಗಿದೆ.


ಜಾಮೀನಿನ ಷರತ್ತುಗಳನ್ನು ನಿರ್ಧರಿಸಲು ಸುಧಾ ಭಾರದ್ವಾಜ್ ಅವರನ್ನು ಡಿಸೆಂಬರ್ 8 ರಂದು ವಿಶೇಷ ಎನ್ ಐಎ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎನ್.ಜೆ. ಜಮಾದಾರ್ ಅವರ ವಿಭಾಗೀಯ ಪೀಠವು ಭಾರದ್ವಾಜ್ ಅವರ ಜಾಮೀನು ಅರ್ಜಿಯನ್ನು ಆಗಸ್ಟ್ 8 ರಂದು ಮತ್ತು ಇತರ ಎಂಟು ಮಂದಿ ಕ್ರಿಮಿನಲ್ ಅರ್ಜಿಯನ್ನು ಸೆಪ್ಟೆಂಬರ್ 1ರಂದು ಕಾಯ್ದಿರಿಸಿತ್ತು.

Join Whatsapp