ನವದೆಹಲಿ : ಕೊಸೊವೊ ಸಂಸತ್ ಅಧಿವೇಶನದಲ್ಲಿ ಅಲ್ಲಿನ ಸಂಸದರೊಬ್ಬರು ‘I Love Muhammad (ನಾನು ಮುಹಮ್ಮದರನ್ನು ಪ್ರೀತಿಸುತ್ತೇನೆ) ಎಂಬ ಮಾಸ್ಕ್ ಧರಿಸಿದ್ದಾರೆ. ಸ್ವಸಂಕಲ್ಪ ಚಳವಳಿಯ ಸದಸ್ಯ ಇಮಾನ್ ರ್ರಹ್ಮಾನಿ ಈ ರೀತಿ ಮಾಸ್ಕ್ ಧರಿಸಿ ಸಂಸತ್ ಅಧಿವೇಶನಕ್ಕೆ ಹಾಜರಾದವರು.
ತಾವು ಈ ಮಾಸ್ಕ್ ಧರಿಸಲು ಎರಡು ಕಾರಣಗಳಿವೆ ಎಂದು ರ್ರಹ್ಮಾನಿ ಹೇಳಿದ್ದಾರೆ. ಪ್ರವಾದಿ ಮುಹಮ್ಮದರ ಬಗ್ಗೆ ಅವಮಾನಕಾರಿ ಬರಹವುಳ್ಳ ಲೇಖನವನ್ನು ಪ್ರಸಾರ ಮಾಡಿದುದಕ್ಕಾಗಿ ಫ್ರಾನ್ಸ್ ರಾಯಭಾರಿ ಕ್ವೆಂಡ್ರಿಮ್ ಘಾಶಿ ಅವರ ಬಗ್ಗೆ ಕೊಸೊವೊ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದು, ಈ ತಿಂಗಳು ಪ್ರವಾದಿಯವರ ಜನ್ಮ ತಿಂಗಳು ಅದಕ್ಕಾಗಿ ಈ ಮಾಸ್ಕ್ ಧರಿಸಿದ್ದೇನೆ ಎಂದು ರ್ರಹ್ಮಾನಿ ಹೇಳಿದ್ದಾರೆ.
ಈ ರೀತಿ ಮಾಸ್ಕ್ ಧರಿಸಿದ ಫೋಟೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಸಮಾಧಾನ ಮತ್ತು ಸೌಮ್ಯವಾಗಿ ಪ್ರತಿಕ್ರಿಯಿಸು. ಅವಮಾನಿಸಬೇಡ, ಹಾಸ್ಯ ಮಾಡಬೇಡ, ಮುಹಮ್ಮದ್ ಮಾನವ ಕುಲಕ್ಕೆ ದಯೆಯ ಸಂದೇಶಗಾರ’’ ಎಂದು ಅವರು ಈ ಫೋಟೊ ಜೊತೆ ಬರೆದುಕೊಂಡಿದ್ದಾರೆ.
ಮುಹಮ್ಮದರನ್ನು ಅವಮಾನಿಸಿದ ಬರಹವುಳ್ಳ ಲೇಖನ ಹಂಚಿಕೊಂಡಿದ್ದುದಕ್ಕಾಗಿ ಘಾಶಿ ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ.