ಜಮ್ಮು-ಕಾಶ್ಮೀರ ಭೂ ಕಾನೂನು ತಿದ್ದುಪಡಿ | ಬಿಜೆಪಿ ಸರಕಾರದ ನಿರ್ಧಾರಕ್ಕೆ ಕಾಶ್ಮೀರಿ ಪಂಡಿತರಿಂದಲೇ ವಿರೋಧ

Prasthutha: October 30, 2020

ಶ್ರೀನಗರ : ಜಮ್ಮು-ಕಾಶ್ಮೀರದ ವಿಷಯ ಮಾತನಾಡುವಾಗ ಬಹುತೇಕ ಬಿಜೆಪಿಗರು ಕಾಶ್ಮೀರಿ ಪಂಡಿತರ ಸಂಕಷ್ಟಗಳ ಬಗ್ಗೆ ಮಾತನಾಡಿಯೇ ಮಾತನಾಡುತ್ತಾರೆ. ಕಾಶ್ಮೀರಿ ಪಂಡಿತರಿಗೆ ತಾವು ಏನೋ ದೊಡ್ಡ ಪರೋಪಕಾರ ಮಾಡಲಿದ್ದೇವೆ ಎಂಬರ್ಥದಲ್ಲಿ ಮಾತನಾಡುತ್ತಿರುತ್ತಾರೆ. ಆದರೆ, ಇದೀಗ ಬಿಜೆಪಿ ಸರಕಾರ ಜಮ್ಮು-ಕಾಶ್ಮೀರದ ಭೂ ಮಸೂದೆ ಕುರಿತು ಮಾಡಲು ಹೊರಟಿರುವ ತಿದ್ದುಪಡಿಯನ್ನು ಸ್ವಯಂ ಕಾಶ್ಮೀರಿ ಪಂಡಿತರೇ ವಿರೋಧಿಸಿದ್ದಾರೆ.

ಜಮ್ಮು-ಕಾಶ್ಮಿರದಲ್ಲಿ ಭೂ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರದ ನಿರ್ಧಾರವನ್ನು ಪಿಡಿಪಿ, ಜೆಕೆ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ, ಕಾಂಗ್ರೆಸ್ ಮತ್ತಿತರ ಪಕ್ಷ, ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಈ ತಿದ್ದುಪಡಿಯು ಕಾಶ್ಮೀರಿ ಪಂಡಿತರಿಗೆ ಮರಣ ಶಾಸನವಾಗಲಿದೆ ಎಂದು ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಅಭಿಪ್ರಾಯ ಪಟ್ಟಿದೆ.

“ನಮ್ಮ ಭೂಮಿಯನ್ನು ಹಿಂಪಡೆಯಲು ಹಿಂದಿನ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳದೆ ಇರುತ್ತಿದ್ದರೆ, ಈ ಬಿಜೆಪಿ ಸರಕಾರದಿಂದ ನಾವು ಶಾಶ್ವತ ಗಡೀಪಾರಾಗಬೇಕಿತ್ತು’’ ಎಂದು ವಲಸಿಗರ ಸಾಮರಸ್ಯ, ಪುನರಾಗಮನ ಮತ್ತು ಪುನರ್ವಸತಿ ಸಂಘಟನೆಯ ಅಧ್ಯಕ್ಷ ಸತೀಶ್ ಮಹಲ್ದಾರ್ ಹೇಳಿದ್ದಾರೆ.

“ನಾವು ನಮ್ಮ ಮೂಲ ಜಮೀನಿಗೆ ಮರಳಲು ಮತ್ತು ಅಲ್ಲಿ ನೆಲೆ ನಿಲ್ಲಲು 31 ವರ್ಷಗಳಿಂದ ಕಾಯುತ್ತಿದ್ದೇವೆ, ನಮಗೆ ಅಲ್ಲಿ ಪುನರ್ವಸತಿ ಮಾಡುವುದು ಬಿಟ್ಟು, ಸರಕಾರ ಕಾಶ್ಮೀರದ ಭೂಮಿಯನ್ನು ಮಾರಾಟ ಮಾಡುವುದು ಮುಕ್ತಗೊಳಿಸಲು ಹೊರಟಿದೆ’’ ಎಂದು ಅವರು ಹೇಳಿದ್ದಾರೆ.

“ಭೂ ಕಬಳಿಕೆದಾರರು ನಮ್ಮ ನಮ್ಮ ದೇವಸ್ಥಾನಗಳು, ಮಂದಿರಗಳು, ಇತರ ಕಾಶ್ಮೀರಿ ಪಂಡಿತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಭೂಮಿಯನ್ನು ಆಕ್ರಮಿಸಿಕೊಳ್ಳಲಿದ್ದಾರೆ ಎಂಬ ಭಯ ನಮ್ಮನ್ನು ಕಾಪಾಡುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಅಲ್ಲಿ ಪುನರ್ವಸತಿ ಮಾಡದೆ, ಯಾವುದೇ ರೀತಿಯ ಭೂಮಿ ಮಾರಾಟಕ್ಕೆ ತಕ್ಷಣವೇ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!