ವೃದ್ಧೆಗೆ ಕಿರುಕುಳ ನೀಡಿದ ಆರೋಪ ಹೊತ್ತ ಎಬಿವಿಪಿ ಅಧ್ಯಕ್ಷನನ್ನು ಏಮ್ಸ್ ಯೋಜನಾ ಮಂಡಳಿಗೆ ನೇಮಿಸಿದ ಕೇಂದ್ರ ಸರಕಾರ

Prasthutha|

►► ಮನೆಬಾಗಿಲಿಗೆ ಮೂತ್ರ ವಿಸರ್ಜಿಸಿದ ಆರೋಪ

- Advertisement -

ಹೊಸದಿಲ್ಲಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷ ಸುಬ್ಬಯ್ಯ ಷಣ್ಮುಗಂರನ್ನು ಕೇಂದ್ರ ಸರಕಾರ ಮಧುರೈನ ತೋಪ್ಪೂರ್ ಗೆ ಬರಲಿರುವ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಯೋಜನೆಯ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿದೆ ಎಂದು ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಬುಧವಾರ ವರದಿ ಮಾಡಿದೆ.

60ರ ಹರೆಯದ ವೃದ್ಧೆಯೊಬ್ಬರು ಷಣ್ಮುಗಂ ವಿರುದ್ಧ ಕಿರುಕುಳ ಆರೋಪವನ್ನು ಮಾಡಿದ ಬಳಿಕ ಅವರು ಸುದ್ದಿಯಲ್ಲಿದ್ದರು. ನಂಗಲ್ಲೂರು ಪ್ರದೇಶದಲ್ಲಿರುವ ಹೌಸಿಂಗ್ ಸೊಸೈಟಿಯೊಂದರಲ್ಲಿ ಪಾರ್ಕಿಂಗ್ ಸ್ಥಳದ ವಿಷಯದಲ್ಲಿ ಇಬ್ಬರ ಮಧ್ಯೆ ಭಿನಾಭಿಪ್ರಾಯವಿತ್ತು. ಷಣ್ಮುಗಂ ತಾತ್ಕಾಲಿಕವಾಗಿ ಮಹಿಳೆಯ ಪಾರ್ಕಿಂಗ್ ಸ್ಥಳವನ್ನು ಬಳಸುತ್ತಿದ್ದರು. ತನ್ನ ಸ್ಥಳಕ್ಕಾಗಿ ಮಾಸಿಕ ಬಾಡಿಗೆ ರೂ.1500 ನೀಡಬೇಕೆಂದು ಆಕೆ ಕೇಳುವುದರೊಂದಿಗೆ ವಿವಾದ ಇನ್ನಷ್ಟು ತೀವ್ರವಾಗಿತ್ತು.

- Advertisement -

ಜುಲೈ 10ರಂದು ನೀಡಿದ ದೂರಿನಲ್ಲಿ ಮಹಿಳೆಯ ಸೋದರ ಪುತ್ರಿ, ಕಿಲಪೌಕ್ ನ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ರೋಯಪೆಟ್ಟಾದ ಸರಕಾರಿ ಆಸ್ಪತ್ರೆಗಳಲ್ಲಿ ಸರ್ಜಿಕಲ್ ಆನ್ ಕಾಲಜಿ ಮುಖ್ಯಸ್ಥರಾಗಿದ್ದ ಶಣ್ಮುಗಂ ವೃದ್ಧೆಯ ಮನೆಬಾಗಿಲಿಗೆ ಮೂತ್ರ ಹೊಯ್ದಿರುವುದಾಗಿ ಮತ್ತು ಬಳಸಲಾದ ಮಾಸ್ಕ್ ಗಳು ಹಾಗೂ ಕಸವನ್ನು ಬಿಸಾಡಿರುವುದಾಗಿ ತಿಳಿಸಿದ್ದರು.

ಮಹಿಳೆಯ ಕುಟುಂಬವು ಸಲ್ಲಿಸಿದ ವೀಡಿಯೊ ಕ್ಲಿಪ್ ನಲ್ಲಿ ಎಬಿವಿಪಿ ನಾಯಕ ಕಸ ಎಸೆಯುವುದು ಮತ್ತು ಆಕೆಯ ಮನೆಯ ಬಾಗಿಲಿಗೆ ಮೂತ್ರ ಹೊಯ್ಯುವ ದೃಶ್ಯಗಳನ್ನು ತೋರಿಸಲಾಗಿದೆ.



Join Whatsapp