ಪಕ್ಷಪಾತಿ ಧೋರಣೆ| ದೆಹಲಿ ಹಿಂಸಾಚಾರದ ಕಾರ್ಯಕ್ರಮಗಳನ್ನು ತೆಗೆದು ಹಾಕುವಂತೆ ‘ಟೈಮ್ಸ್ ನೌ’ ಗೆ NBSA ಆದೇಶ

Prasthutha|

ಹೊಸದಿಲ್ಲಿ: ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತವಾಗಿದ್ದು, ಪ್ರಸಾರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ನ್ಯೂಸ್ ಬ್ರಾಡ್ ಕಾಸ್ಟಿಂಗ್ ಎಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ(NBSA)ಯು ಟೈಮ್ಸ್ ನೌ ವಾಹಿನಿಯ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡು ಪ್ರೈಮ್ ಟೈಮ್ ಚರ್ಚಾ ಕಾರ್ಯಕ್ರಮಗಳನ್ನು ತೆಗೆದು ಹಾಕುವಂತೆ ಆದೇಶಿಸಿದೆ.

- Advertisement -

ವಾಹಿನಿಯ ಎರಡು ಪ್ರೈಮ್ ಟೈಮ್ ಶೋಗಳಾದ “ಶಾಕಿಂಗ್ ಸೀಕ್ರೆಟ್ ಅಡ್ಮಿಶನ್ ಔಟ್ ಇನ್ ಉಮರ್ಸ್ ಅರೆಸ್ಟ್, ಡಸ್ ಲೀವ್ ಲಾಬಿ ನೋ ದಿ ಟ್ರುತ್ ಡೆಲ್ಲಿ ರಯಟ್ಸ್ ಕೀ ವಿಟ್ನೆಸ್ ಇಂಟಿಮಿಡೇಟೆಡ್, ಥ್ರೆಟ್ ಲಿಂಕ್ಡ್ ಟು ಕಿಂಗ್ಪಿನ್?” ಮತ್ತು “ಡೆಲ್ಲಿ ರಯಟ್ಸ್: ಪ್ಲಾಟ್ ಟು ಕಿಲ್ ಕಾಪ್ಸ್ ಎಂಡ್ ಕಾಫಿರ್ಸ್ ಎಕ್ಸಪೋಸ್ಡ್: ಪೀಸ್ಫುಲ್ ಪ್ರೊಟೆಸ್ಟ್ ಎ ಫೆಕೇಡ್?” ಎಂಬ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಾ ಜೋಶಿ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು.



Join Whatsapp