ಇಂಡಿಯನ್ ಸೋಶಿಯಲ್ ಫೋರಂನಿಂದ ಮಕ್ಕಳ ದಿನಾಚರಣೆ

Prasthutha|

ಜಿದ್ದಾ: ಇಂಡಿಯನ್ ಸೋಶಿಯಲ್ ಫಾರಂ ಜಿದ್ದಾ ಕರ್ನಾಟಕ ವಲಯ ಸಮಿತಿ ವತಿಯಿಂದ 132ನೇ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಜಿದ್ದಾದ ಇಸ್ತಿರಾಹದಲ್ಲಿ ನಡೆಯಿತು.

- Advertisement -

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫಾರಂ ಜಿದ್ದಾ ಜಿಲ್ಲಾಧ್ಯಕ್ಷರಾದ ಆರಿಫ್ ಬಜ್ಪೆ  ಮಕ್ಕಳ ದಿನಾಚರಣೆಯ ಮಹತ್ವ, ಮಕ್ಕಳ ಹಕ್ಕುಗಳು, ಆರೈಕೆ, ಶಿಕ್ಷಣ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಷಿಯಲ್ ಫೋರಂ ರಾಜ್ಯಾಧ್ಯಕ್ಷರಾದ ಆಸಿಫ್ ಗಂಜಿಮಠ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಣವು ಇಂದು ಭಾರತದ ಆಡಳಿತ ವರ್ಗದವರ ಕೇಸರೀಕರಣಕ್ಕೆ ಒಳಗಾಗಿದೆ, ಇದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

- Advertisement -

 ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫಾರಂ ರಾಷ್ಟ್ರೀಯ ಸಮಿತಿ ಸದಸ್ಯರಾದ ನಾಸಿರ್ ಬಿ.ಸಿ ರೋಡ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಸನ್ ಕಾಪು, ಐ.ಎಫ್,ಎಫ್ ಪ್ರಧಾನ ಕಾರ್ಯದರ್ಶಿ ಹುಸೈನ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು

  ಅನಿವಾಸಿ ಭಾರತೀಯ ಕುಟುಂಬ ಸಮ್ಮಿಲನ, ಪುಟಾಣಿ ಮಕ್ಕಳ ಖುರ್ ಆನ್ ಓದುವ ಸ್ಪರ್ಧೆ, ಚಿತ್ರಕಲೆ, ರಸ ಪ್ರಶ್ನೆ, ಪ್ರಬಂಧ  ಸ್ಪರ್ಧೆ,ವ್ಯಾಯಾಮ, ಓಟದ ಸ್ಪರ್ಧೆ, ಗ್ರಾಮೀಣ ಕ್ರೀಡೆ ಗಳಾದ ಕೋಕೊ, ಕಣ್ಣು ಕಟ್ಟಿ ಗುರಿ ಮುಟ್ಟುವ ಸ್ಪರ್ಧೆ, ಹಗ್ಗ ಜಗ್ಗಾಟ, ಮುಂತಾದ ಕ್ರೀಡೆ ಗಳನ್ನು ಆಯೋಜಿಸಿ, ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.

Join Whatsapp