ಭೋಪಾಲ್: ಹದಗೆಟ್ಟ ರಸ್ತೆಯ ವಿರುದ್ಧ ಗ್ರಾಮಸ್ಥರು ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತು ಗಹಗಹಿಸಿ ನಗುತ್ತಾ ವಿನೂತನವಾಗಿ ಪ್ರತಿಭಟಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಭೋಪಾಲ್ ನ ಬಾಗ್ ಮುಘಲಿಯಾ ಎಕ್ಸ್’ಟೆನ್ಶನ್ ಕಾಲೋನಿಯ ಅರವಿಂದ್ ವಿಹಾರ್ ನ ಜನರು ಹದಗೆಟ್ಟ ರಸ್ತೆಯಿಂದ ಬೇಸತ್ತು ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತು ಗಹಗಹಿಸಿ ನಗುತ್ತಾ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಮಹಿಳೆಯರು, ಪುರುಷರು ಮತ್ತು ಮಕ್ಕಳು ಬಿತ್ತಿಚಿತ್ರಗಳನ್ನು ಪ್ರದರ್ಶಿಸಿ ಜೋರಾಗಿ ನಗುತ್ತಾ ಪ್ರತಿಭಟಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
“3 ಕೋಟಿ ಮಂಜೂರಾದರೂ ಕಳೆದ 2 ವರ್ಷಗಳಿಂದ ರಸ್ತೆ ನಿರ್ಮಾಣವಾಗಿಲ್ಲ. ನಾವು ಪ್ರತಿಭಟಿಸಿದಾಗ ಒಂದಿಷ್ಟು ಕಾಮಗಾರಿ ನಡೆಸಿ ನಂತರ ಅದನ್ನು ನಿಲ್ಲಿಸುತ್ತಾರೆ” ಎಂದು ಸ್ಥಳೀಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.