ಮಥುರಾ: ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದ ರೈಲು ಹಳಿಗಳ ಮೇಲೆ ಕುಳಿತು ಪಬ್ ಜಿ ಆಟದಲ್ಲಿ ಮಗ್ನರಾಗಿದ್ದ ಇಬ್ಬರ ಮೇಲೆ ರೈಲು ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ.
ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕಪಿಲ್ (18) ಮತ್ತು ರಾಹುಲ್ (16) ಮೃತ ವಿದ್ಯಾರ್ಥಿಗಳು. ಇವರಿಬ್ಬರು ನಿನ್ನೆ ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಕುಳಿತು ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಎರಡು ಮೊಬೈಲ್ ಗಳು ಸಿಕ್ಕಿದ್ದು, ಒಂದು ಮೊಬೈಲ್ ಸಂಪೂರ್ಣವಾಗಿ ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ ಜಿ ಮೊಬೈಲ್ ಗೇಮ್ ಅನ್ನು ಭಾರತದಲ್ಲಿ ನಿಷೇಧವಿದ್ದರೂ ಮಕ್ಕಳಿಗೆ ಸುಲಭವಾಗಿ ಗೇಮ್ ದೊರೆಯುತ್ತಿದೆ.