UPPSCಗೆ ಆಯ್ಕೆಯಾದ 57 ಯುನಾನಿ ವೈದ್ಯಾಧಿಕಾರಿಗಳಲ್ಲಿ 41 ಮಂದಿ AMU ವಿದ್ಯಾರ್ಥಿಗಳು!

Prasthutha|

ಆಲಿಗಢ : ಶತಮಾನೋತ್ಸವ ಆಚರಿಸುತ್ತಿರುವ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು)ದ ವಿದ್ಯಾರ್ಥಿಗಳ ಸಾಧನೆಗೆ ಮತ್ತೊಂದು ಕಿರೀಟ ಸಿಕ್ಕಂತಾಗಿದೆ. ಉತ್ತರ ಪ್ರದೇಶ ನಾಗರಿಕ ಸೇವಾ ಆಯೋಗ (ಯುಪಿಪಿಎಸ್ ಸಿ) ಪರೀಕ್ಷೆಯಲ್ಲಿ ಯುನಾನಿ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆಯಾದ 57 ಮಂದಿಯಲ್ಲಿ 41 ಮಂದಿ ವಿದ್ಯಾರ್ಥಿಗಳು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂಬುದು ಹೆಗ್ಗಳಿಕೆಯ ವಿಚಾರ.

- Advertisement -

ಅ.13-16ರ ವರೆಗೆ ನಡೆದ ಸಂದರ್ಶನದಲ್ಲಿ 57 ಹುದ್ದೆಗಳಿಗೆ ದೇಶಾದ್ಯಂತದ 171 ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ 41 ಮಂದಿ ಎಎಂಯುನಲ್ಲಿ ಅಧ್ಯಯನ ನಡೆಸಿದವರಾಗಿದ್ದಾರೆ.

ಮೊಹಮ್ಮದ್ ಅಕ್ರಂ, ಅಬ್ದುಲ್ ಹಕೀಂ, ಸಯ್ಯದ್ ರಶೀದಿ ಅಲಿ, ಝಾಕಿ ಅಹ್ಮದ್ ಸಿದ್ದೀಕಿ ಸರ್ತಾಜ್ ಅಹಮದ್, ಡ್ಯಾನಿಷ್, ಸಲ್ಲಾಲ್ಲಾ, ವಿಖಾರ್ ಅಹಮದ್, ಸಬೀಹಾ ಸುಂಬುಲ್, ನಜ್ಮುದ್ದೀನ್ ಅಹಮದ್ ಸಿದ್ದೀಕಿ, ಮೊಹಮ್ಮದ್ ಶಾದಾಬ್, ಮೊಹಮ್ಮದ್ ಅಲಿ, ಝಿಯಾವುಲ್ ಹಕ್, ಮೊಹಮದ್ ಅಝಮ್ ಹೀಗೆ 41 ಮಂದಿ ಆಯ್ಕೆಯಾಗಿದ್ದಾರೆ.

- Advertisement -

ಬೋಧಕ ವರ್ಗದ ನಿರಂತರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಎಎಂಯು ಕುಲಪತಿ ಪ್ರೊ. ತಾರಿಖ್ ಮನ್ಸೂರ್ ಹೇಳಿದ್ದಾರೆ. ಆಯ್ಕೆಯಾದ ಎಲ್ಲರನ್ನೂ ಅವರು ಅಭಿನಂದಿಸಿದ್ದಾರೆ.

ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಕೋಮುವಾದಿ ದೃಷ್ಟಿಕೋನದಲ್ಲಿ ನೋಡುವವರಿಗೆ ಅಲ್ಲಿನ ವಿದ್ಯಾರ್ಥಿಗಳ ಈ ಸಾಧನೆ ಮಹತ್ವದ ಪ್ರತ್ಯುತ್ತರವಾಗಿದೆ.   



Join Whatsapp