ಚಂದ್ರಬಾಬು ನಾಯ್ಡು ಕಣ್ಣೀರು ವಿಚಾರ: ಬಾಬು.. ಬೈ ಬೈ ಬಾಬು…ಬೈ ಬೈ ಎಂದ ರೋಜಾ !

Prasthutha|

ಹೈದರಾಬಾದ್: ತಮ್ಮನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ, ಹಿಂದಿನ ಘಟನೆಗಳನ್ನು ಪಟ್ಟಿಮಾಡಿ YSR ಕಾಂಗ್ರೆಸ್ ಶಾಸಕಿ ರೋಜಾ ತಿರುಗೇಟು ಕೊಟ್ಟಿದ್ದಾರೆ. ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ, ನಾವು ಏನು ಮಾಡುತ್ತೆವೆಯೋ, ನಮಗೂ ಅದೇ ಆಗುತ್ತದೆ ಎಂದು ರೋಜಾ ಹೇಳಿದ್ದಾರೆ.

- Advertisement -
https://twitter.com/nameismyself/status/1461663176441806849

ವೀಡಿಯೋವೊಂದನ್ನು ಹಂಚಿಕೊಂಡಿರುವ ಶಾಸಕಿ ರೋಜಾ, ನಾಯ್ಡು ಅವರ ಇಂದಿನ ಪರಿಸ್ಥಿತಿ ಏನಾಗಿದೆಯೋ ಅದು ಅವರದ್ದೇ ಕರ್ಮದ ಫಲ ಎಂದು ಏಕವಚನದಲ್ಲಿ ನಾಯ್ಡುರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಚಂದ್ರಬಾಬು, ವಿಧಿ ಯಾರನ್ನೂ ಬಿಡುವುದಿಲ್ಲ, ಎಲ್ಲರಿಗೂ ಪಾಠ ಕಲಿಸಿಯೇ ಕಲಿಸುತ್ತದೆ. ಈ ಹಿಂದೆ ನೀನು NTRರನ್ನು ಎಷ್ಟೊಂದು ಅವಮಾನಿಸಿದ್ದೀಯಾ ಎಂದು ನೆನಪಿದೆಯಾ? ಅದೇ ಪರಿಸ್ಥಿತಿ ಇಂದು ನಿನಗೆ ಬಂದಿದೆ. ಅದಕ್ಕೆ ಎಲ್ಲರೂ ಹೇಳೋದು, ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ, ನಾವು ಏನು ಮಾಡುತ್ತೆವೆಯೋ ನಮಗೂ ಅದೇ ಆಗುತ್ತದೆ.”

- Advertisement -

ನಿನ್ನ ಪತ್ನಿಯನ್ನು ಅವಮಾಸಿದರು ಎಂದು ಸಂಕಟ ಪಡುತ್ತಿದ್ದೀರಲ್ಲ ಹಿಂದೊಂದು ದಿನ ಹೈದರಾಬಾದ್ ವಿಧಾನಸಭೆಯಲ್ಲಿ ನೀವು ಅಧಿಕಾರದಲ್ಲಿ ಇರಬೇಕಾದರೆ ಏನು ಮಾಡಿದ್ದೀರಿ ಅನ್ನೋದನ್ನು ಮರೆತುಬಿಟ್ಟೆಯಾ? ಪೀತಲ ಸುಜಾತ ಜೊತೆಯಲ್ಲಿ ರೋಜಾ, ಬ್ಲೂ ಫಿಲ್ಮ್ನಲ್ಲಿ ನಟಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಸಿಡಿ ತೋರಿಸಿದ ವಿಚಾರವನ್ನು ಮರೆತುಬಿಟ್ಟೆಯಾ? ನಮಗೂ ಕುಟುಂಬ ಇಲ್ಲವಾ? ಮಕ್ಕಳು ಇಲ್ಲವಾ? ಗೌರವ ಇಲ್ಲವಾ? ನೀವು ಅಧಿಕಾರದಲ್ಲಿ ಇರಬೇಕಾದರೆ, ಯಾರ ಬಗ್ಗೆ ಏನು ಬೇಕಾದರೂ ಹೇಳಬಹುದು, ವಿಜಯಮ್ಮ, ಭಾರತಮ್ಮ ಮತ್ತು ಶರ್ಮಿಳಾಮ್ಮ ಬಗ್ಗೆ ಏನೇನು ಮಾತನಾಡಿ, ಎಷ್ಟೊಂದು ಅವಮಾನ ಮಾಡಿದ್ದೀಯಾ ಅನ್ನೋದನ್ನ ಮರೆಯೋಕ್ಕಾಗಲ್ಲ ಎಂದು ರೋಜಾ ಹಳೆಯದ್ದನ್ನು ಕೆದಕಿ ನಾಯ್ಡುರನ್ನು ಕುಟುಕಿದ್ದಾರೆ.

ನಿನ್ನ ಕಣ್ಣೀರಿನ ನಾಟಕವನ್ನು ನಂಬಲು ಇಲ್ಲಿ ಯಾರು ತಯಾರಿಲ್ಲ. ನಿಜವಾಗಿಯೂ ನಾನಿಂದು ತುಂಬಾ ಸಂತೋಷವಾಗಿದ್ದೇನೆ. ಏಕೆಂದರೆ, ಒಬ್ಬ ಮಹಿಳೆ ಅಂತಾನೂ ನೋಡದೇ ನನ್ನ ವ್ಯಕ್ತಿತ್ವ ಹರಣ ಮಾಡಿದ್ದೀರಿ, ನಿಯಮಕ್ಕೆ ವಿರುದ್ಧವಾಗಿ ಒಂದು ವರ್ಷ ವಿಧಾನಸಭೆಯಿಂದ ಅಮಾನತು ಮಾಡಿದ್ದೀರಿ, ಆದರೆ, ಇಂದು ನೀವು ವಿಧಾನಸಭೆಗೆ ಬರುವುದಿಲ್ಲವೆಂದು ಪ್ರಮಾಣ ಮಾಡಿದ್ದೀರಿ, ವಿಧಿಯಾಟ ಅಂದ್ರೆ ಇದೆ ಬಾಬು ಬೈ ಬೈ ಬಾಬು…ಬೈ ಬೈ ಎಂದು ಚಂದ್ರಬಾಬು ನಾಯ್ಡು ಅವರಿಗೆ ರೋಜಾ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ್ದ ನಾಯ್ಡು, ವಿಧಾನಸಭೆಯಲ್ಲಿ ತಮ್ಮ ಪತ್ನಿ ಭುವನೇಶ್ವರಿಗೆ ವಿಧಾನಸಭೆಯಲ್ಲಿ ತೀವ್ರವಾಗಿ ಅವಮಾನ ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು ಹಿಂದೆಂದೂ ಅನುಭವಿಸಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು. ವಿಧಾನಸಭೆ ಆರಂಭವಾದಾಗಿನಿಂದಲೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ನಿಂದಿಸುತ್ತಲೇ ಬಂದಿದ್ದಾರೆ. ಅವರು ನನ್ನ ಕುಟುಂಬದವರನ್ನೂ ಬಿಡಲಿಲ್ಲ. ಇದನ್ನು ನಾನು ಸಹಿಸಲು ಸಾಧ್ಯವೇ ಇಲ್ಲ. ಅಧಿಕಾರ ಸಿಗುವವರೆಗೂ ನಾನಿಲ್ಲಿ ಕಾಲಿಡಲ್ಲ’ ಎಂದು ಹೇಳುತ್ತಾ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದರು.



Join Whatsapp