ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್ : T-20 ಕ್ರಿಕೆಟ್’ನಲ್ಲಿ ದಾಖಲೆ

Prasthutha|

ರಾಂಚಿ: T-20 ಕ್ರಿಕೆಟ್’ನಲ್ಲಿ ಅತೀಹೆಚ್ಚು ರನ್’ಗಳಿಸಿದ ಬ್ಯಾಟರ್ ಎಂಬ ದಾಖಲೆ ನ್ಯೂಜಿಲೆಂಡ್ ತಂಡದ ಆರಂಭಿಕ, ಅನುಭವಿ ಮಾರ್ಟಿನ್ ಗಪ್ಟಿಲ್ ಪಾಲಾಗಿದೆ.

- Advertisement -

ರಾಂಚಿಯ JSCA ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ಗೆಲುವಿಗೆ 154 ರನ್’ಗಳ ಗುರಿ ನೀಡಿತ್ತು. ಕಿವೀಸ್ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಕೇವಲ 15 ಎಸೆತಗಳಲ್ಲಿ 31 ರನ್’ಗಳಿಸಿದ್ದರು . ಈ ನಡುವೆ ಗಪ್ಟಿಲ್ 14 ರನ್ ಗಳಿಸಿದ್ದ ವೇಳೆ T-20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್’ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ರಾಂಚಿಯಲ್ಲಿ 111ನೇ T-20 ಪಂದ್ಯವನ್ನಾಡಿದ 35 ವರ್ಷದ ಗಪ್ಟಿಲ್ ತಮ್ಮ ರನ್ ಗಳಿಕೆಯನ್ನು 3,248ಕ್ಕೆ ಏರಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾದ T-20 ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಪಂದ್ಯಕ್ಕೂ ಮುನ್ನಾ ಗಪ್ಟಿಲ್, ಕೊಹ್ಲಿಗಿಂತ ಕೇವಲ 10 ರನ್’ಗಳ ಅಂತರದಲ್ಲಿ ಹಿಂದಿದ್ದರು. ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್’ನಲ್ಲೇ 14 ರನ್ ಬಾರಿಸಿದ ಗಪ್ಟಿಲ್ T-20 ಕ್ರಿಕೆಟ್’ನಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು.

- Advertisement -

87 T-20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 3,217 ರನ್’ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾದ T-20 ತಂಡದ ನಾಯಕ ರೋಹಿತ್ ಶರ್ಮಾ, 3,141 ರನ್’ಗಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರು T-20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್’ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಮೂಲಕ ಭಾರತ ತಾಯ್ನೆಲದಲ್ಲಿ ಸತತ 5ನೇ ಬಾರಿಗೆ T-20 ಸರಣಿ ಗೆದ್ದ ಸಾಧನೆಯನ್ನೂ ಮಾಡಿದೆ.

Join Whatsapp