ಲಂಡನ್: ಭಾರತದಿಂದ ಲೂಟಿ ಹೊಡೆಯಲಾಗಿದ್ದ ಟಿಪ್ಪು ಸುಲ್ತಾನ್ ಸಿಂಹಾಸನನದ ಕಳಸವೊಂದನ್ನು ಬ್ರಿಟನ್ ಸರ್ಕಾರ ಹರಾಜಿಗೆ ಇಟ್ಟಿದೆ.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದಲ್ಲಿ ಅಳವಡಿಸಿದ್ದ, ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ 15 ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಬ್ರಿಟನ್ ಸಂಸ್ಕೃತಿ ಇಲಾಖೆ ಇದನ್ನು ಹರಾಜಿಗೆ ಇಟ್ಟಿದೆಯಾದರೂ ಇದರ ರಪ್ತಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಮೂಲಕ ಅದಕ್ಕೆ ಬ್ರಿಟನ್ ಖರೀದಿದಾರರನ್ನೇ ಹುಡುಕಲಾಗಿದೆ. ಕಳಸವನ್ನು ಬ್ರಿಟನ್ ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ.
18ನೇ ಶತಮಾನದಲ್ಲಿ ಮೈಸೂರು ರಾಜ್ಯ ಆಳುತ್ತಿದ್ದ ವೇಳೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು. ಆ ಪೈಕಿ ಇದು ಕೂಡಾ ಒಂದು ಆಗಿದೆ.