►ಪ್ರತಿ ರಾಜ್ಯದಲ್ಲೂ ಗೋಡ್ಸೆ ಸ್ಮಾರಕ ನಿರ್ಮಾಣ
ನವದೆಹಲಿ: ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಸ್ಮಾರಕವನ್ನು ಅಂಬಾಲಾ ಜೈಲಿನ ಮಣ್ಣಿನಿಂದ ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿದೆ.
ಈ ಬಗ್ಗೆ ಮಾತನಾಡಿದ ಹಿಂದೂ ಮಹಾಸಭಾದ ಉಪಾಧ್ಯಕ್ಷ ಡಾ. ಜೈವೀರ್ ಭಾರಧ್ವಾಜ್ , 1949ರಲ್ಲಿ ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಅವರನ್ನು ನೇಣಿಗೇರಿಸಿದ ಹರ್ಯಾಣದ ಅಂಬಾಲಾ ಜೈಲಿನಿಂದ ತಂದಿರುವ ಮಣ್ಣಿನಿಂದ ಇಬ್ಬರ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಅಲ್ಲದೆ, ಗ್ವಾಲಿಯರ್ ನಲ್ಲಿನ ಹಿಂದೂ ಮಹಾಸಭಾ ಕಚೇರಿಯಲ್ಲಿ ನಿರ್ಮಾಣ ಮಾಡಲಿರುವ ಸ್ಮಾರಕಕ್ಕೆ ಜೈಲಿನ ಮಣ್ಣನ್ನು ಬಳಸಲಾಗುವುದು ಎಂದು ಹೇಳಿದ್ದಾರೆ.