ಅಮರಾವತಿ ಹಿಂಸಾಚಾರ: ಗಲಭೆಗೆ ಪ್ರಚೋದನೆ ನೀಡಿದ ಬಿಜೆಪಿ ಮುಖಂಡನ ಬಂಧನ

Prasthutha|

ಪುಣೆ: ಅಮರಾವತಿ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಗಲಭೆಗೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಡಾ. ಅನಿಲ್ ಬೋಂಡೆ ಸೇರಿದಂತೆ ಇತರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಘಟನೆಯ ನಂತರ ಮತ್ತೋರ್ವ ಬಿಜೆಪಿ ಮುಖಂಡ ಪ್ರವೀಣ್ ಪೋಟೆ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

ಅಮರಾವತಿಯ ಕೊತ್ವಾಲಿ ಎಂಬಲ್ಲಿ ಶನಿವಾರ ಬಿಜೆಪಿ ಬಂದ್ ಗೆ ಕರೆ ನೀಡಿದಾಗ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಈ ಬಂಧನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಮಾತ್ರವಲ್ಲ ಅಮರಾವತಿ ಬಂದ್ ವೇಳೆ ಮುಸ್ಲಿಮ್ ಸಮುದಾಯದ ಒಡೆತನದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೈದು, ಬೆಂಕಿ ಹಚ್ಚಲಾಗಿತ್ತು.

ಈ ಸಂಬಂಧ ಬಿಜೆಪಿ ಮುಖಂಡ ಅನಿಲ್ ಬೋಂಡೆ ಸೇರಿದಂತೆ ಹಲವಾರು ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.



Join Whatsapp