ರಿಕ್ಷಾ ಚಾಲಕನಿಗೆ ತನ್ನ ಕೋಟಿ ರೂ. ಮೌಲ್ಯದ ಆಸ್ತಿ ದಾನ ಮಾಡಿದ ಮಹಿಳೆ: ಕಾರಣವೇನು ಗೊತ್ತಾ ?

Prasthutha|

ಒಡಿಶಾ : 63 ವರ್ಷದ ವೃದ್ಧೆಯೋರ್ವರು ತನಗೆ ಹಾಗೂ ತನ್ನ ಕುಟುಂಬಕ್ಕೆ 25 ವರ್ಷಗಳ ಕಾಲ ಮಾಡಿದ ಸೇವೆಯನ್ನು ಗುರುತಿಸಿ ತನ್ನ ಎಲ್ಲಾ ಆಸ್ತಿಗಳನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ.ಮಿನಾತಿ ಪಟ್ನಾಯಕ್ ಅವರ ಕುಟುಂಬಕ್ಕೆ ರಿಕ್ಷಾ ಚಾಲಕ ಬುಧಾ ಸಮಲ್‌ ಅವರು ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

- Advertisement -

“ನನ್ನ ಪತಿ ಹಾಗೂ ಮಗಳ ಸಾವಿನ ಬಳಿಕ ನಾನು ದುಃಖದಲ್ಲಿ ಜೀವನ ಸಾಗಿಸುತ್ತಿದ್ದೆ. ನನ್ನ ಕಷ್ಟಕಾಲದಲ್ಲಿ ನನ್ನ ಸಂಬಂಧಿಕರು ಯಾರೂ ಕೂಡಾ ನನಗೆ ನೆರವಾಗಲಿಲ್ಲ. ಪತಿ ಹಾಗೂ ಮಗಳ ಸಾವಿನ ಬಳಿಕ ನಾನು ಒಬ್ಬಂಟಿಯಾಗಿದ್ದೆ. ಹೀಗಿರುವಾಗ ರಿಕ್ಷಾ ಚಾಲಕ ಹಾಗೂ ಅವನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತ್ತು. ಏನನ್ನೂ ನಿರೀಕ್ಷಿಸದೇ ನನ್ನ ಆರೋಗ್ಯವನ್ನು ನೋಡಿಕೊಂಡಿದ್ದಾರೆ” ಎಂದು ಮಿನಾತಿ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

“ನನ್ನ ಮಗಳನ್ನು ಅವನು ಕಾಲೇಜಿಗೆ ಕಳುಹಿಸುತ್ತಿದ್ದ. ಅವರು ನಮ್ಮ ಕುಟುಂಬದ ರಿಕ್ಷಾ ಚಾಲಕರಾಗಿದ್ದರು. ನನ್ನ ಆಸ್ತಿಯನ್ನು ಅವರಿಗೆ ನೀಡುವ ಮೂಲಕ ನಾನು ಅವರಿಗೆ ದೊಡ್ಡ ಸೇವೆಯನ್ನು ಮಾಡುತ್ತಿಲ್ಲ. ಬದಲಾಗಿ ಅವರು ಅದಕ್ಕೆ ಅರ್ಹರಾಗಿದ್ದಾರೆ” ಎಂದು ಹೇಳಿದ್ದಾರೆ. ಮಿನಾತಿ ಅವರು ಮೂರು ಸಹೋದರಿಯರ ಪೈಕಿ ಇಬ್ಬರು ಆಸ್ತಿಯನ್ನು ರಿಕ್ಷಾ ಚಾಲಕನಿಗೆ ಹಾಗೂ ಅವರ ಕುಟುಂಬಕ್ಕೆ ನೀಡುವ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ, ಮಿನಾತಿ ಅವರು ದೃಢ ನಿರ್ಧಾರ ಕೈಗೊಂಡು ರಿಕ್ಷಾ ಚಾಲಕ ಹಾಗೂ ಅವರ ಕುಟುಂಬಕ್ಕೆ ತನ್ನೆಲ್ಲಾ ಆಸ್ತಿಯನ್ನು ಕಾನೂನುಬದ್ಧವಾಗಿ ನೀಡಿದ್ದಾರೆ.



Join Whatsapp