ಗೋವುಗಳಿಗಾಗಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಆದಿತ್ಯನಾಥ್ ಸರ್ಕಾರ

Prasthutha|

ಲಖ್ನೋ: ಉತ್ತರ ಪ್ರದೇಶ ಸರ್ಕಾರವು ಗೋವುಗಳಿಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ.

- Advertisement -

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಗೋವುಗಳಿಗಾಗಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ರಾಜ್ಯ ಹೈನುಗಾರಿಕೆ ಅಭಿವೃದ್ಧಿ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದ್ದಾರೆ.
515 ಆಂಬ್ಯುಲೆನ್ಸ್‌ ಗಳು ಸೇವೆಗಾಗಿ ಸಿದ್ಧವಾಗಿವೆ ಎಂದು ವರದಿಯಾಗಿದೆ. ತುರ್ತು ಸಂಖ್ಯೆ 112 ಗೆ ಕರೆ ಮಾಡಿದರೆ ಪಶುವೈದ್ಯರು ಮತ್ತು ಇಬ್ಬರು ಸಹಾಯಕರು 15-20 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಬರುತ್ತಾರೆ. ಡಿಸೆಂಬರ್ ವೇಳೆಗೆ ಈ ಯೋಜನೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋವುಗಳನ್ನು ದತ್ತು ಪಡೆಯುವಂತೆ ಧಾರ್ಮಿಕ ಮುಖಂಡರಿಗೆ ಸೂಚಿಸಿದ್ದರು. ಯಾರಾದರೂ ಶೆಲ್ಟರ್ ಹೋಮ್ ನಿಂದ ಗೋವುಗಳನ್ನು ದತ್ತು ಪಡೆದರೆ ಅವರಿಗೆ ಸರ್ಕಾರದಿಂದ ತಿಂಗಳಿಗೆ 900 ರೂಪಾಯಿ ನೀಡಲಾಗುವುದು ಎಂದು ಅವರು ಹೇಳಿದ್ದರು.

- Advertisement -

ಪ್ರಜೆಗಳ ಹಾಗೂ ದೇಶದ ಆರ್ಥಿಕತೆಯನ್ನು ಬಲಪಡಿಸಲು ಗೋವು, ಸಗಣಿ ಮತ್ತು ಮೂತ್ರಕ್ಕೆ ಸಾಧ್ಯವಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ವಿಚಿತ್ರ ಹೇಳಿಕೆಯನ್ನು ನೀಡಿದ್ದರು. ಮುಖ್ಯಮಂತ್ರಿಯೊಬ್ಬರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಪಹಾಸ್ಯಕ್ಕೆ ಗುರಿಯಾಗಿತ್ತು.



Join Whatsapp