ಶನಿವಾರಸಂತೆಯಲ್ಲಿ 144 ಸೆಕ್ಷನ್ ಜಾರಿ; ಪ್ರತಿಭಟನೆಗೆ ಮುಂದಾದ ಸಂಘಪರಿವಾರ ಕಾರ್ಯಕರ್ತರ ಬಂಧನ

Prasthutha|

ಕೆಎಸ್ ಆರ್ ಪಿ ತುಕಡಿಯಿಂದ ಪಥಸಂಚಲನ

- Advertisement -

ಶನಿವಾರಸಂತೆ: ಸಂಘಪರಿವಾರ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು, ಪ್ರತಿಭಟನೆ, ಮೆರವಣಿಗೆಗೆ ತಡೆ ನೀಡಲಾಗಿದೆ. ಸೆಕ್ಷನ್ ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾಗಿದ್ದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.


ಕೆ.ಆರ್.ಸಿ ವೃತ್ತದ ಬಳಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದು, ಜನಗುಂಪು ಸೇರದಂತೆ ಪೊಲೀಸರು ಮೈಕ್ ಮೂಲಕ ಎಚ್ಚರಿಕೆ ನೀಡಿದರು. ಆದರೆ ಪ್ರತಿಭಟನಕಾರರು ಅಲ್ಲಿಂದ ಚದುರದಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

- Advertisement -


ಮುಂಜಾಗೃತಾ ಕ್ರಮವಾಗಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಎಸ್ ಆರ್ ಪಿ ತುಕಡಿ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. ಕೆಲವರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೆರಿತವಾಗಿ ಬಂದ್ ಮಾಡಿದ್ದಾರೆ.


ಕುಶಾಲನಗರ ಡಿವೈಎಸ್.ಪಿ , ಶನಿವಾರಸಂತೆ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಬಂದೊಬಸ್ತ್ ಕೈಗೊಳ್ಳಲಾಗಿದೆ.
ಸ್ಥಳೀಯ ಮಾಜಿ ಸೈನಿಕರೊಬ್ಬರ ವಿವಾಹ ಸಮಾರಂಭ ಇಂದೇ ನಿಗದಿಯಾಗಿತ್ತು. ಅವರ ಕುಟುಂಬದವರು ಅಲ್ಲಿಗೆ ಹೊರಡಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಮಾಜಿ ಸೈನಿಕನನ್ನು ಬಂಧಿಸಲು ಮುಂದಾದಾಗ ಅವರು ವಾಹನದ ಮುಂಭಾಗ ಮಲಗಿ ಪ್ರತಿಭಟಿಸಿದ ಘಟನೆಯೂ ನಡೆಯಿತು.


ಸಂತ್ರಸ್ತ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ಮುಸ್ಲಿಮ್ ಮಹಿಳೆಯರು ಕಳೆದ ವಾರ ಶನಿವಾರಸಂತೆ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಂಬೇಡ್ಕರ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೆ ಸಂಘಪರಿವಾರದ ಕಾರ್ಯಕರ್ತರು ಈ ಘೋಷಣೆಯ ವೀಡಿಯೋವನ್ನು ತಿರುಚಿ, ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಶನಿವಾರಸಂತೆ ಬಂದ್ ಗೆ ಕರೆ ನೀಡಿದ್ದಾರೆ. ಈಗಾಗಲೇ ವೀಡಿಯೋ ತಿರುಚಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

Join Whatsapp