ಗೋ ಹತ್ಯೆ ತಡೆ ಕಾಯ್ದೆ ಅಮಾಯಕರ ವಿರುದ್ಧ ದುರ್ಬಳಕೆ : ಅಲಹಾಬಾದ್ ಹೈಕೋರ್ಟ್ ಕಳವಳ

Prasthutha|

ಲಖನೌ : ಉತ್ತರ ಪ್ರದೇಶ ಗೋ ಹತ್ಯೆ ತಡೆ ಕಾಯ್ದೆ 1955 ಅನ್ನು ಅಮಾಯಕರ ವಿರುದ್ಧ ದುರ್ಬಳಕೆ ಮಾಡುತ್ತಿರುವ ಬಗ್ಗೆ ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

- Advertisement -

“ಕಾಯ್ದೆಯನ್ನು ಅಮಾಯಕರ ವಿರುದ್ಧ ದುರ್ಬಳಕೆ ಮಾಡಲಾಗುತ್ತಿದೆ. ಯಾವುದೇ ಮಾಂಸ ಪತ್ತೆಯಾದರೆ, ಅದರ ಬಗ್ಗೆ ಯಾವುದೇ ಪರಿಶೀಲನೆ ನಡೆಸದೆ ಅಥವಾ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪಡೆಯದೆ, ಅದನ್ನು ಗೋಮಾಂಸ ಎಂದು ತೋರಿಸಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಮಾಂಸವನ್ನು ಪರೀಕ್ಷೆಗೆ ಕಳುಹಿಸಲಾಗಿಲ್ಲ’’ ಎಂದು ನ್ಯಾಯಮೂರ್ತಿ ಸಿದ್ಧಾರ್ಥ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗೋ ಹತ್ಯೆ ಮಾಡಿದ ಮತ್ತು ಮಾರಾಟ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲ್ಪಟ್ಟಿರುವ ಆರೋಪಿ ರೆಹ್ಮುದ್ದೀನ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರೆಹ್ಮುದ್ದೀನ್ ವಿರುದ್ಧ ಎಫ್ ಐಆರ್ ನಲ್ಲಿ ಇಂತಹ ಯಾವುದೇ ಆರೋಪಗಳಿರಲಿಲ್ಲ. ಘಟನಾ ಸ್ಥಳದಿಂದಲೂ ಆತನನ್ನು ಬಂಧಿಸಿರಲಿಲ್ಲ. ಆದರೂ, ಒಂದು ತಿಂಗಳಿನಿಂದ ಆತ ಜೈಲಿನಲ್ಲಿದ್ದಾನೆ ಎಂದು ಕೋರ್ಟ್ ಗೆ ಮನವರಿಕೆ ಮಾಡಲಾಗಿತ್ತು.  



Join Whatsapp