ಚಂದ್ರನ ಮೇಲ್ಮೈ ಮೇಲೆ ನೀರು ಇರುವುದು ಖಚಿತ | ದೃಢಪಡಿಸಿದ ನಾಸಾ

Prasthutha|

ನ್ಯೂಯಾರ್ಕ್ : ಚಂದ್ರನ ಮೇಲ್ಮೈಯ ಸೂರ್ಯಕಿರಣದಲ್ಲಿ ನೀರಿನ ಅಂಶ ಇರುವುದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವಿಜ್ಞಾನಿಗಳು ದೃಢಪಡಿಸಿದ್ದಾರೆ.

- Advertisement -

ನೀರಿನ ಕಣಗಳು ಚಂದ್ರನ ಮೇಲ್ಮೈ ಮೇಲೆ ನೆರಳಿನ ಪ್ರದೇಶಗಳಲ್ಲಿ, ಶೀತಲ ಪ್ರದೇಶಗಳಲ್ಲಿ ಮಿತವಾದ ಪ್ರಮಾಣದಲ್ಲಿರಬಹುದು ಎಂದು ಬಾಹ್ಯಾಕಾಶ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ನಾಸಾ ವಿಜ್ಞಾನಿಗಳು ಇದಕ್ಕಿಂತಲೂ ಮಹತ್ವದ ಸಂಶೋಧನೆಯನ್ನು ಬಹಿರಂಗ ಪಡಿಸಿದ್ದಾರೆ.

ನಾಸಾದ ಎಸ್ ಒಎಫ್ ಐಎ ಸಂಶೋಧನೆಗಳ ಪ್ರಕಾರ, ಚಂದ್ರನ ಮೇಲ್ಮೈ ಮೇಲೆ ಶೀತಲ ಪ್ರದೇಶದಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ಜಲಾಶಯಗಳಿರುವ ಸಾಧ್ಯತೆಯಿದೆ ಎಂದು ದೃಢಪಡಿಸಲಾಗಿದೆ.

- Advertisement -

ಚಂದ್ರನ ಮೇಲ್ಮೈಯಲ್ಲಿ ಎಲ್ಲಾ ಕಡೆ ನೀರಿನ ಕಣಗಳಿವೆ ಎಂಬುದನ್ನು ಭಾರತದ ಚಂದ್ರಯಾನ-1 2008ರಲ್ಲೇ ಮೊದಲ ಬಾರಿ ಸೂಚಿಸಿತ್ತು. ಚಂದ್ರನ ಮೇಲೆ ನೀರಿನ ಕಣಗಳಿದ್ದರೂ, ಅದರ ಪ್ರಮಾಣ ತುಂಬಾ ಕಡಿಮೆ, ಸಹರಾ ಮರುಭೂಮಿಯಲ್ಲಿರುವ ನೀರಿನ ಪ್ರಮಾಣಕ್ಕಿಂತ ನೂರು ಪಟ್ಟು ಕಡಿಮೆ ಪ್ರಮಾಣದ ನೀರು ಅಲ್ಲಿರುವುದು ಎಂದು ಹೇಳಲಾಗುತ್ತಿದೆ.  

Join Whatsapp