ಕಂಗನಾಗೆ ಪ್ರಶಸ್ತಿ ಅಲ್ಲ, ಚಿಕಿತ್ಸೆ ನೀಡಬೇಕಿದೆ: ಪದ್ಮಶ್ರೀ ಹಿಂಪಡೆಯುವಂತೆ ರಾಷ್ಟ್ರಪತಿಗೆ ಮಹಿಳಾ ಆಯೋಗ ಪತ್ರ !

Prasthutha|

ನವದೆಹಲಿ: ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಕ್ಷ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಕಂಗನಾ ಕ್ಷಮೆ ಕೇಳಬೇಕು ಹಾಗು ಅವರಿಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಬೇಕೆಂದು ಹಲವರು ಆಗ್ರಹಿಸಿದ್ದಾರೆ.

- Advertisement -

ಈ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ  ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತನಡಿದ್ದ ನಟಿ ಕಂಗನಾ ರನೌತ್ ಅವರಿಗೆ ನೀಡಲಾದ ಪದ್ಮಶ್ರೀಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವುದಾಗಿ ಭಾನುವಾರ ಹೇಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ  ಚಿಕಿತ್ಸೆಗೆ ಅವಶ್ಯಕತೆಯಿದೆ ಹೊರತು ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಅವರ ತ್ಯಾಗ ಮತ್ತು ಸಾವಿರಾರು ಇತರರ ತ್ಯಾಗದ ಮೂಲಕ ಸಾಧಿಸಿದ ಸ್ವಾತಂತ್ರ್ಯವನ್ನು ಅಗೌರವಿಸಿದ್ದಕ್ಕಾಗಿ ಪ್ರಶಸ್ತಿಯಲ್ಲ ಎಂದು ಹೇಳಿದ್ದಾರೆ.



Join Whatsapp