ಮೊರಾದಾಬಾದ್: ಭಾರತದ ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಆರೋಪಿಸಿದ್ದಾರೆ.
ಮುಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡಿದ್ದರೆ, ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ನಾಯಕ ಒಪಿ ರಾಜ್ ಭರ್ ಹೇಳಿಕೆಗೆ ಉವೈಸಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
“ಇತಿಹಾಸವನ್ನು ಓದದಿರುವ ಆರೆಸ್ಸೆಸ್, ಬಿಜೆಪಿ ಮತ್ತು ಸಮಾಜವಾದಿ ಪಕ್ಷಕ್ಕೆ ನಾನು ಸವಾಲು ಹಾಕುತ್ತೇನೆ. ವಿಭಜನೆಗೆ ಕಾರಣ ಮುಸ್ಲಿಮರಲ್ಲ. ಆ ಸಮಯದಲ್ಲಿ ನವಾಬರು ಅಥವಾ ಪದವೀಧರರಂತಹ ಪ್ರಭಾವಿ ಮುಸ್ಲಿಮರು ಮಾತ್ರ ಮತ ಚಲಾಯಿಸಬಹುದಾಗಿತ್ತು. ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರು ಕಾರಣ” ಎಂದು ಉವೈಸಿ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.