ಮಂಗಳೂರು: ನಿಲ್ಲಿಸಿದ ಕಾರಿನಲ್ಲಿದ್ದ ಮೃತದೇಹದ ಗುರುತು ಪತ್ತೆ !

Prasthutha|

ಮಂಗಳೂರು: ಕಂಕನಾಡಿ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ ಎಂದು ಗುರುತಿಸಲಾಗಿದ್ದು, ಈ ಹಿಂದೆ ಇವರು ನಾಪತ್ತೆ ಆಗಿದ್ದು,ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -


ಗುರುವಾರ ರಾತ್ರಿಯಿಂದಲೇ ಈ ಕಾರು ಕಂಕನಾಡಿಯಲ್ಲಿ ನಿಂತಿತ್ತು ಎಂದು ಸ್ಥಳೀಯರು‌ ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನವೂ ಈ ಕಾರು ಅನಾಥ ಸ್ಥಿತಿಯಲ್ಲಿರುವುದನ್ನು ಕಂಡ ಸಾರ್ವಜನಿಕರು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

Join Whatsapp