ಉತ್ತರ ಪ್ರದೇಶದಲ್ಲಿ ಮುಂದುವರಿದ ಮರುನಾಮಕರಣ ಪರ್ವ| ವೇದಮೌ ಆಗಿ ಬದಲಾದ ಐತಿಹಾಸಿಕ ಬದಾಯೂನ್

Prasthutha|

ಲಕ್ನೋ: ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದಲ್ಲಿ ಮತ್ತೊಂದು ಜಿಲ್ಲೆಯ ಹೆಸರನ್ನು ಬದಲಾಯಿಸುವ ಸ್ಪಷ್ಟವನ್ನು ಸೂಚನೆಯನ್ನು ನೀಡಿದ್ದಾರೆ.

- Advertisement -

ಮಂಗಳವಾರ ಬದಾಯೂನ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್ , “ಬದಾಯೂನ್ ಅನ್ನು ಈ ಮೊದಲು ವೇದಮೌ ಎಂದು ಕರೆಯಲಾಗುತ್ತಿತ್ತು. ಇದು ವೇದಾಧ್ಯಯನದ ಕೇಂದ್ರ ಮತ್ತು ವಿಶ್ವದ ಅತ್ಯಂತ ಫಲವತ್ತಾದ ಭೂಮಿಯಾಗಿದೆ ಎಂದು ತಿಳಿಸಿದರು.

ಹೆಸರು ಬದಲಾವಣೆಯ ಕುರಿತು ಯಾವುದೇ ಬೇಡಿಕೆಯಿಲ್ಲದಿದ್ದರೂ ಕೂಡ ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಬಿಜೆಪಿ ಇದನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಬಿಜೆಪಿ ನಾಯಕ ರಜಿತ್ ಸಬರ್ವಾಲ, ನಾವು ಬದಾಯೂನ್ ಹೆಸರನ್ನು ಬದಲಾಯಿಸಲು ಔಪಚಾರಿಕ ಬೇಡಿಕೆಯನ್ನು ಇಟ್ಟಿದ್ದೇವೆ. ನಾವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಸತ್ಯ ಹುಡುಕಲು ಇತಿಹಾಸದ ಪರಿಶೀಲನೆ ನಡೆಸುತ್ತಿದ್ದೇವೆ. ಮುಂಬರುವ ಅಸೆಂಬ್ಲಿ ಚುನಾವಣೆಗೂ ಮುನ್ನ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಪ್ರಸಕ್ತ ಬುದೌನ್ ನಲ್ಲಿ 21 ಶೇಕಡಾದಷ್ಟು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿದೆ.

ಅಲಿಘಡವನ್ನು ಹರಿಘಡ ಆಗಿಯೂ, ಸುಲ್ತಾನ ಪುರವನ್ನು ಕುಶಭಾವನ್ ಪುರ ಎಂದು ಬದಲಾಯಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಬಳಿಯೇ ಬಾಕಿ ಉಳಿದಿರುವುದು ಗಮನಾರ್ಹ



Join Whatsapp