ಮಿಚಿಗನ್: ಮೊತ್ತ ಮೊದಲ ಅರಬ್ ಅಮೆರಿಕನ್ ಮೇಯರ್ ಅನ್ನು ಆಯ್ಕೆ ಮಾಡುವ ಮೂಲಕ ಮಿಚಿಗನ್ ನ ಡಿಯರ್ ಬಾರ್ನ್ ನಗರ ಇತಿಹಾಸ ನಿರ್ಮಿಸಿದೆ.
ಲೆಬನಾನಿನ ವಲಸಿಗ ಕುಟುಂಬದಲ್ಲಿ ಜನಿಸಿದ 31 ವರ್ಷದ ಅಬ್ದುಲ್ಲಾ ಹಮ್ಮೌದ್, ಅರಬ್ಬರ ನಿರ್ಣಾಯಕ ಪ್ರಭಾವದ ನಗರವಾದ ಡಿಯರ್ಬಾರ್ನ್ ನಗರದ ಮೇಯರ್ ಪದವಿಯನ್ನು ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹಮ್ಮೌದ್ 66 ವರ್ಷದ ಮಾಜಿ ರಾಜ್ಯ ಪ್ರತಿನಿಧಿ ಮತ್ತು ಮಾಜಿ ವೇಯ್ನ್ ಕೌಂಟಿ ಕಮಿಷನರ್ ಗ್ಯಾರಿ ವೊರೊನ್ಚಾಕ್ ಅವರ ವಿರುದ್ಧ ಜಯಭೇರಿ ಭಾರಿಸಿದ್ದಾರೆ.
ಇದು ಹೊಸ ಯುಗದ ಹುಟ್ಟು ಎಂದು ಮೇಯರ್ ಆಗಿ ಆಯ್ಕೆಯಾದ ಹಮ್ಮೌದ್ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಳ್ಳುವ ಹಮ್ಮೌದ್, ಅಮೆರಿಕದ ಮಧ್ಯಪಶ್ಚಿಮದಲ್ಲಿನ ಅತಿದೊಡ್ಡ ನಗರಗಳಲ್ಲಿ ಒಂದಾದ ಮಿಚಿಗನ್ನ 110,000 ಜನಸಂಖ್ಯೆಯ ಡಿಯರ್ಬಾರ್ನ್ ಅನ್ನು ಮುನ್ನಡೆಸುವ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.